ಬೆಂಗಳೂರು: ಸರ್ಕಾರ ಹಾಗೂ ಲಾರಿ ಮಾಲೀಕರ ನಡುವಿನ ಸಂಧಾನ ಯಶಸ್ವಿಯಾಗಿದ್ದು, ಲಾರಿ ಮಾಲೀಕರು ಮುಷ್ಕರವನ್ನು ವಾಪಾಸ್ ಪಡೆದಿದ್ದಾರೆ.
ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದ (Lorry Strike) ಬಗ್ಗೆ ಮಾಧ್ಯಮಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಮಾತನಾಡಿದರು. ಲಾರಿ ಮಾಲೀಕರು ಜೊತೆ ಸಭೆ ನಡೆಸಿದ್ದೇವೆ. ಆರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲು ಆಯುಕ್ತರ ಜೊತೆ ಸಭೆ ನಡೆಸಿದ್ದರು. ಆನ್‌ಲೈನ್‌ನಲ್ಲಿ ದಂಡ ಕಟ್ಟುವ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್ ಜೈನ್
ಒಟಿಎಸ್ ಮಾದರಿಯಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸುವಂತೆ ಕೇಳಿದ್ದಾರೆ. ಅದನ್ನು ಸಿಎಂ ಗಮನಕ್ಕೆ ತರಲಿದ್ದೇವೆ ಹಾಗೂ ಟೋಲ್ ವಿಚಾರವನ್ನೂ ಸಿಎಂ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಿನ್ನ ಪ್ರೀತಿ, ತ್ಯಾಗ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಪತ್ನಿಗೆ ನಿಖಿಲ್ ಲವ್ಲಿ ವಿಶ್
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪ್ರತಿಕ್ರಿಯಿಸಿ, ನಾಲ್ಕು ಪ್ರಮುಖ ಬೇಡಿಕೆ ಇತ್ತು. ಬಾರ್ಡರ್ ಚೆಕ್‌ಪೋಸ್ಟ್ ಸಮಸ್ಯೆಯನ್ನು 3 ತಿಂಗಳಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಡಿಸೇಲ್ ದರ 2023ರಲ್ಲಿ ಯದ್ವಾತದ್ವಾ ಏರಿಕೆ ಮಾಡಿದ್ದರು. ಇದನ್ನು ಇನ್ನೊಂದು ಬಾರಿ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ
ನೋ ಎಂಟ್ರಿ 5 ಗಂಟೆ ಮೇಲೆ ಬರಲು ಆಗದೇ ಇರುವುದರ ಬಗ್ಗೆಯೂ ಗಮನ ಹರಿಸುವುದಾಗಿ ಹೇಳಿದ್ದಾರೆ. ಪೊಲೀಸರ ಕಿರುಕುಳದ ಬಗ್ಗೆಯೂ ತಿಳಿಸಿದ್ದೇವೆ ಎಂದು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದಿಂದ ದಿನಕ್ಕೆ 4,500 ಕೋಟಿ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಹೇಳಿದರು.