ದಾವಣಗೆರೆ: ಅಂಗನವಾಡಿ ಮುಗಿಸಿ ಅಜ್ಜಿ ಜೊತೆ ಮನೆಗೆ ತೆರಳುತ್ತಿದ್ದ ಬಾಲಕಿ (Girl) ಮೇಲೆ ಎಂ ಸ್ಯಾಂಡ್ ಟಿಪ್ಪರ್ (Tipper) ಹರಿದು ಬಾಲಕಿ ಸಾವನ್ನಪ್ಪಿರುವ ಮನಕಲಕುವ ಘಟನೆ ದಾವಣಗೆರೆ (Davanagere) ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ.
ಕುಂದುವಾಡ ಗ್ರಾಮದ ಗಣೇಶ್ ಪುತ್ರಿ ಚರಸ್ವಿ (3) ಸಾವನ್ನಪ್ಪಿದ ಬಾಲಕಿ. ಚಕ್ರ ಹರಿದ ರಭಸಕ್ಕೆ ಬಾಲಕಿ ಮೆದುಳು ಚಿದ್ರ ಚಿದ್ರಗೊಂಡಿದೆ. ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಅವಘಡ ನಡೆದಿದ್ದು ಮಾತ್ರವಲ್ಲದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ತವರಿನಲ್ಲಿ ಈ ರೀತಿ ಘಟನೆ ನಡೆದಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆಯಿಂದ ಸಂಜೆ ವರೆಗೂ ಬೃಹತ್ ವಾಹನಗಳು ನಗರದಲ್ಲಿ ಸಂಚಾರ ಮಾಡುವಂತಿಲ್ಲ ಎನ್ನುವ ಎಸ್‌ಪಿ ಅವರ ಆದೇಶವಿದ್ದರೂ ಕೂಡ ಅದನ್ನು ಧಿಕ್ಕರಿಸಿ ಎಂ ಸ್ಯಾಂಡ್ ಲಾರಿಗಳು ಅಡ್ಡಾಡುತ್ತಿವೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಘಟನೆ ಖಂಡಿಸಿ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು
ಲಾರಿ ಚಾಲಕ, ಮಾಲೀಕನ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಪೌಂಡ್ ಹತ್ತುವ ವೇಳೆ ಜಾರಿಬಿದ್ದು ವಿದ್ಯಾರ್ಥಿನಿ ಸಾವು