ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ವರಾಹಿ ಹಿನ್ನೀರಿಗೆ ಬಿದ್ದು, ಮುಳುಗಿ ಹೋದ ಘಟನೆ ಹೊಸನಗರ (Hosanagar) ತಾಲೂಕಿನ ಹುಲಿಕಲ್‌ನಲ್ಲಿ (Hulikal) ನಡೆದಿದೆ.
ರಾತ್ರಿ ತೀರ್ಥಹಳ್ಳಿಯಿಂದ (Thirthahalli) ಕುಂದಾಪುರಕ್ಕೆ ಜೋಳ ತುಂಬಿಸಿಕೊಂಡು ಲಾರಿ ತೆರಳುತ್ತಿತ್ತು. ಹುಲಿಕಲ್ ಘಾಟಿ ಬಳಿ ಬಂದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ವರಾಹಿ ನದಿಗೆ ಬಿದ್ದಿದೆ. ಚಾಲಕ ಇಬ್ರಾಹಿಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೀದಿಯಲ್ಲಿ ಬಿದ್ದಿದ್ದ ಮಗು ತಂದು ಸಾಕಿದ್ದ ತಾಯಿ – 13 ವರ್ಷಕ್ಕೆ ಅದೇ ಮಗಳಿಂದ ಹೋಯ್ತು ಜೀವ!
ಚಾಲಕ ನಿದ್ರೆ ಮಂಪರಿನಲ್ಲಿ ಇದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ