ಅಪ್ಪನೊಂದಿಗೆ ಶಾಲೆಗೆ ಹೋಗ್ತಿದ್ದಾಗ ಬೈಕಿಗೆ ಲಾರಿ ಡಿಕ್ಕಿ- ಚಕ್ರದಡಿ ಸಿಲುಕಿ ಬಾಲಕಿ ಸಾವು

Public TV
1 Min Read
ctd accident

ಚಿತ್ರದುರ್ಗ: ಲಾರಿ ಚಾಲಕನ ಅವಸರಕ್ಕೆ ತಂದೆಯ ಕಣ್ಣೆದುರೇ 7 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ನಡೆದಿದೆ.
ctd accident 1
ವಾಸವಿ ಶಾಲೆಯ ಪೂರ್ಣ(7) ಮೃತ ಬಾಲಕಿ. ಅಪ್ಪನೊಂದಿಗೆ ಪೂರ್ಣ ಬೈಕ್‍ನಲ್ಲಿ ಶಾಲೆಗೆ ಹೋಗ್ತಿದ್ದ ವೇಳೆ ಓವರ್ ಟೇಕ್ ಮಾಡಲು ಹೋಗಿ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಚಕ್ರದ ಅಡಿಗೆ ಸಿಲುಕಿ ಬಾಲಕಿ ಅಪ್ಪಚ್ಚಿಯಾಗಿದ್ದಾಳೆ.

ctd accident 4

ಬಾಲಕಿ ಸಿದ್ದಾಪುರದಿಂದ ಅಪ್ಪನೊಂದಿಗೆ ಬೈಕ್‍ನಲ್ಲಿ ಚಳ್ಳಕೆರೆಯ ವಾಸವಿ ಶಾಲೆಗೆ ಹೋಗ್ತಿದ್ದಳು. ಅತ್ತ ಚಳ್ಳಕೆರೆ ಕಡೆಯಿಂದ ಬರುತ್ತಿದ್ದ ಲಾರಿ ಸಿದ್ದಾಪುರ ಸಮೀಪದ ಪೂಜಾ ಡಾಬ ಬಳಿ ಬೈಕಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸುರೇಶ್ ಅವರಿಗೂ ಕೂಡ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ctd accident 3

ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ctd accident 2

ctd

Share This Article
Leave a Comment

Leave a Reply

Your email address will not be published. Required fields are marked *