ಮಗುಚಿ ಬಿತ್ತು ಟೊಮೆಟೋ ತುಂಬಿದ್ದ ಲಾರಿ – ಕಳ್ಳರ ಹಾವಳಿ ತಡೆಯಲು ಪೊಲೀಸರಿಂದ ಬಂದೋಬಸ್ತ್

Public TV
1 Min Read
KOLAR TOMATO TELANGANA

ಕೋಲಾರ: ಕಳೆದ ಒಂದು ತಿಂಗಳಿನಿಂದ ಟೊಮೆಟೋ ದರ ರಾಕೆಟ್ ವೇಗದಲ್ಲಿ ಗಗನಕ್ಕೇರಿದ್ದು ಇದು ರೈತರ ಪಾಲಿಗೆ ವರದಾನವಾಗಿದೆ. ಪ್ರತಿ ಬಾರಿ ಟೊಮೆಟೋಗೆ ಸೂಕ್ತ ಬೆಲೆ ಇಲ್ಲದೇ ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ರಸ್ತೆಗೆ ಸುರಿಯುತ್ತಿದ್ದ ರೈತರು, ಈ ಬಾರಿ ಟೊಮೆಟೋ ಬೆಳೆಯಲ್ಲಿ ಭರ್ಜರಿ ಲಾಭ ಕಾಣುತ್ತಿದ್ದಾರೆ.

TOMATO 1

ಚಿನ್ನದ ಬೆಲೆ ಬಂದಿರುವುದರಿಂದ ಟೊಮೆಟೋ ಕಳ್ಳರ ಹಾವಳಿ ಹೆಚ್ಚಾಗಿದೆ. ಇದರ ನಡುವೆ ಟೊಮೆಟೋ ತುಂಬಿಕೊಂಡು ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಲಾರಿ ತೆಲಂಗಾಣದಲ್ಲಿ ಪಲ್ಟಿಯಾಗಿದೆ. ಹೀಗಾಗಿ ಬಿದ್ದಿರುವ ಟೊಮೆಟೋ ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದನ್ನೂ ಓದಿ: ಟೊಮೆಟೋ ಬೆಳೆದು ಒಂದೇ ತಿಂಗಳಲ್ಲಿ ಕೋಟಿ-ಕೋಟಿ ಬಾಚಿದ ರೈತ – ದಂಪತಿ ಫುಲ್‌ ಖುಷ್‌

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ತುಂಬಿಸಿಕೊಂಡು ದೆಹಲಿಗೆ ತೆರಳುತ್ತಿದ್ದ ಲಾರಿ ಇದಾಗಿದ್ದು, ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದಿದೆ. ಇದರಿಂದ ಟೊಮೆಟೋ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಟೊಮೆಟೋ ಕಳ್ಳರಿಂದ ರಕ್ಷಣೆ ನೀಡಲು ಮೂವರು ಪೊಲೀಸರನ್ನು ತೆಲಂಗಾಣ ಪೊಲೀಸ್ ಇಲಾಖೆ ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಇದನ್ನೂ ಓದಿ: ಕಳವಳ ಉಂಟುಮಾಡಿದ ರೇಡಿಯೋ ಕಾಲರ್ – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article