ಬೆಂಗಳೂರು: ಚಾಲಕನ ಅಜಾಗರೂಕತೆಯಿಂದ ಮೆಟ್ರೋ ಕಾಮಗಾರಿಗಾಗಿ ತೆರದಿದ್ದ ಹಳ್ಳಕ್ಕೆ ಟಿಪ್ಪರ್ ಲಾರಿಯೊಂದು ಉರುಳಿಬಿದ್ದ ಘಟನೆ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.
Advertisement
ಇಂದು ಬೆಳಗಿನ ಜಾವ 4:30 ರ ಸುಮಾರಿನಲ್ಲಿ ಹೊಸಕೋಟೆ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಟಿನ್ ಫ್ಯಾಕ್ಟರಿ ಬಸ್ ಸ್ಟಾಪ್ ಸಮೀಪ ಅಳವಡಿಸಿದ್ದ ಮೆಟ್ರೋ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದಿದೆ. ಬ್ಯಾರಿಕೇಡ್ ಪಕ್ಕದಲ್ಲಿ ಕಾರ್ಮಿಕರು ತಂಗಲು ಇರಿಸಿದ್ದ ಕಂಟೇನರ್ ಗೂ ಡಿಕ್ಕಿ ಹೊಡೆದಿದ್ದರಿಂದ ಕಂಟೇನರ್ ಕೂಡ ಗುಂಡಿಗೆ ಬಿದ್ದಿದೆ.
Advertisement
Advertisement
ಗುಂಡಿಗೆ ಬಿದ್ದಿರುವ ಲಾರಿ ಹಾಗೂ ಕಂಟೇನರ್ ಕ್ರೇನ್ ಮೂಲಕ ಹೊರ ತೆಗೆಯುವ ಕಾರ್ಯದಲ್ಲಿ ಬಿಎಂಆರ್‍ಸಿಎಲ್ ಸಿಬ್ಬಂದಿ ನಿರತರಾಗಿದ್ದು ಲಾರಿ ಚಾಲಕ ಮಣಿ ಎಂಬವನ ಸ್ಥಿತಿ ಗಂಭೀರವಾಗಿದೆ. ಕಂಟೇನರ್‍ನಲ್ಲಿ ಓರ್ವ ಕಾರ್ಮಿಕ ನಿದ್ರಿಸುತ್ತಿದ್ದು ಕಂಟೇನರ್ ನಲ್ಲಿ ಸಿಲುಕಿರುವ ಸಾಧ್ಯತೆ ಇರುವುದರಿಂದ ಗ್ಯಾಸ್ ಕಟಿಂಗ್ ಮೂಲಕ ಕಂಟೇನರ್ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
Advertisement
ಘಟನೆಯಿಂದಾಗಿ ಟಿನ್ ಫ್ಯಾಕ್ಟರಿ ಯಿಂದ ಕೆ.ಆರ್. ಪುರದ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆ.ಆರ್. ಪುರ ಸಂಚಾರಿ ಪೊಲೀಸರು ಹರಸಾಹಸ ಪಟ್ಟು ಟ್ರಾಫಿಕ್ ಜಾಮ್ ನಿಯಂತ್ರಿಸಿದ್ದಾರೆ.