ಬಳ್ಳಾರಿ: ಲಾರಿಯಲ್ಲಿ ಓವರ್ ಲೋಡ್ ಭತ್ತ ಹಾಕಿದ್ದಾನೆಂದು ಲಾರಿ ಚಾಲಕನ್ನನು ಸುಡು ಬಿಸಿಲಿನಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿಸಿದ ಅಮಾನುಷ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಶಿಕ್ಷೆ ಕೊಟ್ಟಿದ್ದು ಲಾರಿ ಅಸೋಸಿಯೇಷನ್ ಸಲೀಂ ಶೇಕ್ಷಾವಲಿ. ಜಿಲ್ಲೆಯ ಸಿರಗುಪ್ಪದಲ್ಲಿರುವ ರೈಸ್ ಮಿಲ್‍ಗೆ ಲಾರಿಯಲ್ಲಿ ಭತ್ತವನ್ನು ಓವರ್‍ಲೋಡ್ ಮಾಡಿಕೊಂಡು ಚಾಲಕ ಬಂದಿದ್ದಾನೆ ಎಂದು ಆಕ್ರೋಶಗೊಂಡ ಸಲೀಂ ಶೇಕ್ಷಾವಲಿ ಚಾಲಕನನ್ನು ಅರಬೆತ್ತಲೆಗೊಳಿಸಿ ಸುಡುವ ಟೈಲ್ಸ್ ಕಲ್ಲಿನ ಮೇಲೆ ಉರುಳು ಸೇವೆ ಮಾಡಿಸಿದ್ದಾನೆ.
Advertisement
Advertisement
ಸುಡು ಬಿಸಿಲಿನಲ್ಲಿ ಅರೆಬೆತ್ತಲೆಯಾಗಿದ್ದ ಲಾರಿ ಚಾಲಕ ಪರಿಪರಿಯಾಗಿ ಬೇಡಿಕೊಂಡರೂ ಬಿಡದ ಮಾಲೀಕರ ಈ ಅಮಾನುಷ ಕೃತ್ಯದ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ಘಟನೆಯ ಬಗ್ಗೆ ಸಂಘಟನೆ ಪ್ರಶ್ನೆ ಮಾಡಿದರೆ ಚಾಲಕ ಕುಡಿದು ಚಾಲನೆ ಮಾಡಿದ್ದ ಹೀಗಾಗಿ ತಮಾಷೆಗಾಗಿ ಮಾಡಿದ್ದು ಎನ್ನುತ್ತಿದ್ದಾನೆ.
Advertisement
ಈ ಘಟನೆಯ ನಂತರ ಕೆಲವರು ಈ ಕೃತ್ಯದಿಂದ ಅಸೋಸಿಯೇಷನ್ ಗೆ ಕೆಟ್ಟ ಹೆಸರು ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಘಟನೆ ದೂರು ನೀಡಲು ಮುಂದಾಗಿದ್ದು, ಹೀಗಾಗಿ ತಪ್ಪಿತಸ್ಥರ ವಿರುದ್ಧ ದೂರು ನೀಡಲಾಗುವುದೆಂದು ಹೇಳಿದ್ದಾರೆ. ಆದರೆ ಓವರ್ ಲೋಡ್ ಬಗ್ಗೆ ಪ್ರಶ್ನಿಸುವ ಹಕ್ಕು ಸಂಘಟನೆಗಿಲ್ಲ. ಇದು ಆರ್.ಟಿಒ ಅಧಿಕಾರಿಗಳ ಕರ್ತವ್ಯ. ದಂಡ ಮತ್ತು ಕೇಸ್ ಹಾಕೋದು ಪೊಲೀಸ್ ಮತ್ತು ಆರ್‍ಟಿಒ ಗೆ ಸಂಬಂಧಿಸಿದ್ದು, ಇದು ಯಾವ ಸಂಘಟನೆಗೂ ಹಕ್ಕು ಇರುವುದಿಲ್ಲ.
Advertisement
https://www.youtube.com/watch?v=ivImr4KQTCg