ಮಂಡ್ಯ: ಸಾರ್ವಜನಿಕರು ನೋಡ ನೋಡುತ್ತಿದ್ದಂತೆ ಲಾರಿ ಹರಿದು ಪಾದಚಾರಿ ಒಬ್ಬರು ಮೃತಪಟ್ಟಿರುವ ಭಯಾನಕ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
ಶಂಕರ್ (40) ಮೃತ ದುರ್ದೈವಿ. ಶಂಕರ್ ಪಾಂಡವಪುರ ಪಟ್ಟಣದ ರಾಜ್‍ಕುಮಾರ್ ವೃತ್ತದ ಬಳಿ ರಸ್ತೆ ದಾಟಲು ಹೋಗಿದ್ದಾರೆ. ಈ ವೇಳೆ ತಿರುವಿನಲ್ಲಿ ವೇಗವಾಗಿ ಬಂದ ಲಾರಿ ಪಾದಾಚಾರಿ ಮೇಲೆ ಹರಿದು ಮೃತಪಟ್ಟಿದ್ದಾರೆ.
ನೋಡ ನೋಡುತ್ತಿದ್ದಂತೆ ನೂರಾರು ಜನ ಸಾರ್ವಜನಿಕರೆದುರೇ ನಡೆದ ಅಪಘಾತ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಲಾರಿ ಹರಿದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.