ಲಾರಿ-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Public TV
1 Min Read
Raichuru Bike Accident

ರಾಯಚೂರು: ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಗೇರಾದ (Yargera) ಮಂತ್ರಾಲಯ (Mantralaya) ರಸ್ತೆಯ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ (Andhrapradesh) ಮಾಧವರಂನ ಮದನಪಲ್ಲಿ ಗ್ರಾಮದ 37 ವರ್ಷದ ರೆಡ್ಡಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಶೂಟಿಂಗ್ ಮುಗಿಸಿ ಆಸ್ಪತ್ರೆಗೆ ಬಂದಿದ್ದೆ, ಕೊನೆಯ ಬಾರಿಗೆ ಪ್ರಜ್ಞೆಯಲ್ಲಿದ್ದಾಗ ನೋಡಲಾಗಲಿಲ್ಲ: ತಾಯಿಯ ಅಗಲಿಕೆಗೆ ಕಿಚ್ಚ ಭಾವುಕ

ಬೈಕ್ ಸವಾರ ರಾಯಚೂರಿನಿಂದ (Raichuru) ಮಾಧವರಂಗೆ ತೆರಳುತ್ತಿದ್ದ. ಈ ವೇಳೆ ಆಂಧ್ರಪ್ರದೇಶದಿಂದ ರಾಯಚೂರು ಕಡೆಗೆ ಬರುತ್ತಿದ್ದ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ರಿಮ್ಸ್ (RIMS) ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕಲಬುರಗಿ| ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ – 1.4 ಲಕ್ಷ ರೂ. ಮೌಲ್ಯದ 2.15 ಕೆಜಿ ಗಾಂಜಾ ಜಪ್ತಿ

Share This Article