ಮಡಿಕೇರಿ: ಬೈಕ್ ಹಾಗೂ 10 ಚಕ್ರದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರನ ದೇಹ ಎರಡು ತುಂಡಾಗಿ ಮೃತಪಟ್ಟ ಘಟನೆ ಕುಶಾಲನಗರದ (Kushalnagar) ಕೂಡ್ಲೂರು ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಗಂಗಾಧರ ಎಂದು ಗುರುತಿಸಲಾಗಿದೆ. ಈತ ಮೂಲತ ಹಾಸನ (Hassan) ಜಿಲ್ಲೆಯ ಅರಸಿಕೆರೆಯವನಾಗಿದ್ದ. ಕುಶಾಲನಗರದಲ್ಲಿ ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಕೆಲಸ ಮುಗಿಸಿ ವಾಪಸ್ ರೂಮಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮೋದಿಗಾಗಿ ಬೃಹತ್ ಔತಣ ಕೂಟ – ಮುಖೇಶ್ ಅಂಬಾನಿ, ಸುಂದರ್ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್ ಲಿಸ್ಟ್
ಅಪಘಾತ ನಡೆದ ಮೇಲೆ ಬೈಕ್ ಸವಾರನ ಮೇಲೆ ಲಾರಿ ಹರಿದಿದೆ. ಇದರ ಪರಿಣಾಮ ಬೈಕ್ ಸವಾರನ ದೇಹ ಎರಡು ತುಂಡಾಗಿದೆ. ಘಟನೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 24 ಗಂಟೆ ಹೋಟೆಲ್ ತೆರೆಯಲು ಅವಕಾಶ ಕೊಡಿ – ಡಿಸಿಎಂ ಡಿಕೆಶಿಗೆ ಮನವಿ