ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿ- ಕಬ್ಬಿಣದ ಸಲಾಕೆ ದೇಹಕ್ಕೆ ಹೊಕ್ಕು ಚಾಲಕ ದುರ್ಮರಣ

Public TV
1 Min Read
CTD

ಚಿತ್ರದುರ್ಗ: ಕಬ್ಬಿಣದ ರಾಡ್ ತುಂಬಿಕೊಂಡು ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅವಘಡ ಸಂಭವಿಸಿದೆ. ಮೃತ ದುರ್ದೈವಿ ಚಾಲಕನನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ನಿವಾಸಿ ನಯಾಜ್ ಸಾಬ್ (45) ಎಂದು ಗುರುತಿಸಲಾಗಿದೆ.

CTD ACCDENT

 

ಕಬ್ಬಿಣದ ರಾಡ್ ತುಂಬಿದ್ದ ಲಾರಿ ಚಿತ್ರದುರ್ಗದಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಈ ಲಾರಿಗೆ ನಯಾಜ್ ಅವರು ಇದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಬ್ಬಿಣದ ರಾಡ್ ನಯಾಜ್ ದೇಹಕ್ಕೆ ಹೊಕ್ಕು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

CTD ACCDENT AV 2

 

CTD ACCDENT AV 5

Share This Article
Leave a Comment

Leave a Reply

Your email address will not be published. Required fields are marked *