– ಮಹಾತ್ಮ ಗಾಂಧಿ ಒಬ್ಬ ಮತಾಂಧ
ಮೈಸೂರು: ವಿಚಾರವಾದಿ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಗವಾನ್‍ರವರು ರಾಮ ಮಂದಿರ ಏಕೆ ಬೇಡ? ಎಂಬ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ರಾಮನ ಬಗ್ಗೆ ವಿವಾದಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಮ, ಮಹಾತ್ಮ ಗಾಂಧೀಜಿ ಹಾಗೂ ಚಾಮುಂಡಿ ದೇವಿಯನ್ನು ಟೀಕಿಸಿದ್ದಾರೆ.
Advertisement
Advertisement
ವಿವಾದಾತ್ಮಕ ಅಂಶಗಳೇನು?
ರಾಮ ಹಾಗೂ ಸೀತೆ ಮಾಂಸವನ್ನು ಸೇವಿಸುತ್ತಿದ್ದರು. ಮದ್ಯಪಾನವನ್ನು ಮಾಡುತ್ತಿದ್ದರು. ರಾಮ ತನ್ನ ಕೈಯಿಂದ ಸೀತೆಗೆ ಮದ್ಯಪಾನ ಮಾಡಿಸುತ್ತಿದ್ದ. ರಾಮ ಏಕಪತ್ನಿವ್ರತಸ್ಥ ಎನ್ನುವುದು ಕಟ್ಟುಕತೆ. ರಾಮ ಹುಡುಗಿಯರ ಹಾಗೂ ವನಿತೆಯರ ಜೊತೆ ಕುಡಿದು ನೃತ್ಯ ಮಾಡಿ, ಅವರನ್ನು ಸಂತೋಷ ಪಡಿಸುತ್ತಿದ್ದ. ರಾಮ ದೇವರೇ ಅಲ್ಲ, ಅವನೊಬ್ಬ ಕೊಲೆಗಡುಕ. ದಾಳಿಕೋರರಿಂದ ತಪ್ಪಿಸಿಕೊಳ್ಳಲಾಗದವರು, ದೇವರುಗಳೇ ಅಲ್ಲವೆಂದು ಉಲ್ಲೇಖಿಸಿದ್ದಾರೆ.
Advertisement
ಇದಲ್ಲದೇ ಕೃಷ್ಣ, ಶಿವ, ಚಾಮುಂಡಿ ಹಾಗೂ ಮಾರಮ್ಮರನ್ನು ಕಸದಂತೆ ತಿರಸ್ಕರಿಸಿ ಎಸೆಯಿರಿ. ಮಹಾತ್ಮ ಗಾಂಧೀಜಿಯೂ ಒಬ್ಬ ಮತಾಂಧ ಹಾಗೂ ಮೂಲಭೂತವಾದಿಯಾಗಿದ್ದಾನೆ. ಗಾಂಧೀಜಿ, ರಾಮ, ಗೀತೆ, ಚಾತುರ್ವರ್ಣ ಪ್ರತಿಪಾದಿಸಿದ್ದು, ಶೂದ್ರರಿಗೆ ಮಾಡಿದ ಮಹಾ ದ್ರೋಹ ಎಂದು ಬರೆದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv