ನವದೆಹಲಿ: ಭಗವಾನ್ ರಾಮ ರಾಜಕೀಯದ ವಿಷಯವಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ರಾಜಕೀಯದೊಂದಿಗೆ ಧರ್ಮ ಕೆಲಸ ಮಾಡುವುದಿಲ್ಲ ಎಂದು ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ (Dhirendra Shastri) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆ ಕುರಿತು ಮಾತನಾಡಿದ ಅವರು, ಇದು ಎಲ್ಲಾ ಹಿಂದೂಗಳು ಮತ್ತು ಸನಾತನಿಗೆ ದೊಡ್ಡ ಗೆಲುವು. ಈ ಕಾರ್ಯಕ್ರಮವು ದೀಪಾವಳಿ ಹಬ್ಬಕ್ಕಿಂತ ಹೆಚ್ಚು ವಿಶೇಷವಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಭಗವಾನ್ ರಾಮ ಭಕ್ತರು ಈ ದಿನಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಮಸೀದಿಯನ್ನ ಕಳೆದುಕೊಂಡಿದ್ದೇವೆ.. ನಿಮ್ಮ ಹೃದಯದಲ್ಲಿ ನೋವಿಲ್ಲವೇ: ಬಾಬ್ರಿ ಮಸೀದಿ ಬಗ್ಗೆ ಮುಸ್ಲಿಂ ಯುವಕರಿಗೆ ಓವೈಸಿ ಪ್ರಶ್ನೆ
Advertisement
Advertisement
ಭಗವಾನ್ ರಾಮನು ಎಲ್ಲರಿಗೂ ಸೇರಿದವನು. ಭಗವಾನ್ ರಾಮ ಮಹಾನ್ ನಾಯಕ. ರಾಮಮಂದಿರ ನಿರ್ಮಾಣವಾಗುತ್ತಿರುವುದು ಜಾತೀಯತೆಗಾಗಿ ಅಲ್ಲ. ಎಲ್ಲ ರಾಮಭಕ್ತರ ನಂಬಿಕೆಗಾಗಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
Advertisement
ಬಾಬ್ರಿ ಮಸೀದಿ ವಿವಾದ ಕುರಿತ ಓವೈಸಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಅವರ ಭಯವನ್ನು ತೋರಿಸುತ್ತದೆ. ನಾವು ಮಸೀದಿಗಳ ಮೇಲೆ ದೇವಾಲಯಗಳನ್ನು ನಿರ್ಮಿಸಲು ಬಯಸುವುದಿಲ್ಲ. ಆದರೆ ದೇವಾಲಯಗಳನ್ನು ಪುನರ್ನಿರ್ಮಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ
Advertisement
ಈಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿ, ನಾವು ನಮ್ಮ ಮಸೀದಿಯನ್ನ ಕಳೆದುಕೊಂಡಿದ್ದೇವೆ. ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ ಎಂದು ಮುಸ್ಲಿಂ ಸಮುದಾಯದ ಯುವಕರಲ್ಲಿ ಪ್ರಶ್ನಿಸಿದ್ದರು.