ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲಿದ್ದಾರೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದರು.
ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಯನ್ನು ಹಾಡಿ ಹೊಗಳಿದರು. ಜನವರಿ 22 ರಂದು ಭಗವಾನ್ ಶ್ರೀರಾಮನು ತನ್ನ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಸೀನನಾಗಲಿದ್ದಾನೆ. ಈ ಮೂಲಕ ಸುಮಾರು 500 ವರ್ಷಗಳ ಕಾಯುವಿಕೆ ಕೊನೆಗೊಳ್ಳಲಿದೆ ಎಂದರು.
Advertisement
Advertisement
ಭಗವಂತನ ಆಗಮನದ ಮೊದಲು ಅಯೋಧ್ಯೆಯನ್ನು (Ayodhya Ram Mandir) ವಿಶ್ವದ ಅತ್ಯಂತ ಸುಂದರವಾದ ನಗರವನ್ನಾಗಿ ಸ್ಥಾಪಿಸಲು ಪ್ರಧಾನಿ ಸಂಕಲ್ಪ ಮಾಡಿದ್ದರು. ಅದರಂತೆ ಇಂದು ವಿವಿಧ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಇಂದು ಅಯೋಧ್ಯೆಯ ಜನರು ಪ್ರಧಾನಿಯನ್ನು ಸ್ವಾಗತಿಸಿರುವ ರೀತಿ ನಾವೆಲ್ಲರೂ ನವ ಭಾರತದ ಹೊಸ ಅಯೋಧ್ಯೆಯನ್ನು ನೋಡುವಂತೆ ಮಾಡುತ್ತದೆ ಎಂದು ಹೇಳಿದರು.
Advertisement
Advertisement
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮೋದಿಯವರು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು ಅಯೋಧ್ಯೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳುತ್ತಾ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಇದನ್ನೂ ಓದಿ: Modi In Ayodhya: ಪ್ರಧಾನಿ ಮೋದಿಯಿಂದ ʻಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣʼ ಲೋಕಾರ್ಪಣೆ
#WATCH | Ayodhya: Uttar Pradesh CM Yogi Adityanath says, "Lord Ram (idol) will be installed in Ram temple on January 22 and the wait of 500 years will end…" pic.twitter.com/XGOKQ7jiHL
— ANI (@ANI) December 30, 2023
ಇಂದು ಬೆಳಗ್ಗೆ 10.45ರ ಸುಮಾರಿಗೆ ಅಯೋಧ್ಯೆಗೆ ಆಗಮಿಸಿರುವ ಪ್ರಧಾನಿ ಮೋದಿಯವರು ಮೊದಲು ರೋಡ್ ಶೋ ನಡೆಸಿದರು. ಬಳಿಕ ರೈಲ್ವೆ ನಿಲ್ದಾಣ ಉದ್ಘಾಟನೆ ಮಾಡಿದರು. ಇದೇ ವೇಳೆ ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ ತೋರಿದರು. ಅದಾದ ಬಳಿಕ ವಿಮಾನ ನಿಲ್ದಾಣ ಉದ್ಘಾಟಿಸಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಮಕ್ಕಳಿಬ್ಬರ ಭೇಟಿಯಾಗಿ ಸೆಲ್ಫಿ, ಆಟೋಗ್ರಾಫ್ ನೀಡಿದ ಪ್ರಧಾನಿ