ಪಾಟ್ನಾ: ಬಿಹಾರ ಸಚಿವ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೂ (Pran Prathistha Ceremony) ಮುನ್ನ ಹೇಳಿಕೆಯೊಂದನ್ನು ನೀಡಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
Advertisement
ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಶ್ರೀರಾಮನು ತನ್ನ ಕನಸಿನಲ್ಲಿ ಬಂದಿದ್ದಾನೆ. ಜನವರಿ 22 ರಂದು ಅಯೋಧ್ಯೆಗೆ ಹೋಗುವುದಿಲ್ಲ ಎಂದು ನನ್ನ ಬಳಿ ಹೇಳಿದ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ. ಇದೀಗ ಇವರ ಹೇಳಿಕೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ತೇಜ್ ಪ್ರತಾಪ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.ಇದನ್ನೂ ಓದಿ: 60 ವರ್ಷಗಳಿಂದ ಮಾಡಿದ ಅನ್ಯಾಯಕ್ಕೆ ಕಾಂಗ್ರೆಸ್ಸಿಗರು ಈಗ ನ್ಯಾಯ ಕೇಳಲು ಹೊರಟಿದ್ದಾರೆ: ಮುನಿಸ್ವಾಮಿ ವ್ಯಂಗ್ಯ
Advertisement
Advertisement
ವೀಡಿಯೋದಲ್ಲೇನಿದೆ..?: ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಬಿಜೆಪಿ (BJP) ಪಕ್ಷವನ್ನು ಗೇಲಿ ಮಾಡಿದ್ದಾರೆ. ಚುನಾವಣೆಗಳು ಮುಗಿದ ನಂತರ ರಾಮನ ಮಹತ್ವವು ಮಸುಕಾಗುತ್ತದೆ ಎಂದರು. ಮಾತು ಮುಂದುವರಿಸಿ, ಶ್ರೀರಾಮ ಜನವರಿ 22 ರಂದು ಮಾತ್ರ ಅಯೋಧ್ಯೆಗೆ ಬರುವುದು ಅಗತ್ಯವೇ?, ಅವನು ಬರುವುದಿಲ್ಲ. ಯಾಕೆಂದರೆ ಈ ಕುರಿತು ನಾನು ಕನಸು ಕಂಡಿದ್ದೇನೆ. ಭಗವಾನ್ ರಾಮ ನನ್ನ ಕನಸಲ್ಲಿ ಬಂದು ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ. ಅಲ್ಲದೆ ಆ ದಿನ ನಾನು ಅಯೋಧ್ಯೆಗೆ ಬರುವುದಿಲ್ಲ ಎಂದು ಕೂಡ ರಾಮ ಹೇಳಿದ ಎಂದು ತಿಳಿಸಿದ್ದಾರೆ.
Advertisement
22 तारीख़ को राम जी नहीं आयेंगे
हमको भी 4 शंक्राचार्य की तरह सपने में आकर बोले हैं राम जी — तेज प्रताप यादव #ayodhyarammandir #tejpratapyadav pic.twitter.com/rj5oaUAtb0
— Uved Muazzam ???????? (@mohd_uved) January 14, 2024
ತೇಜ್ ಪ್ರತಾಪ್ ಯಾದವ್ ಅವರ ಕನಸುಗಳು ಈ ಹಿಂದೆಯೂ ಚರ್ಚೆಯಲ್ಲಿವೆ. ಕಳೆದ ವರ್ಷವೂ ಇಂಥದ್ದೇ ಹೇಳಿಕೆ ನೀಡಿದ್ದರು. ಮುಲಾಯಂ ಸಿಂಗ್ ಯಾದವ್ ಕನಸಿನಲ್ಲಿ ಬಂದಿದ್ದಾರೆ. ಮುಲಾಯಂ ಸಿಂಗ್ ಜೊತೆ ಸಾಕಷ್ಟು ಮಾತನಾಡಿದ್ದಲ್ಲದೇ ಅವರು ನನ್ನನ್ನು ಅಪ್ಪಿಕೊಂಡರು. ಜೊತೆಗೆ ಕನಸಿನಲ್ಲಿ ಮುಲಾಯಂ ಸಿಂಗ್ ಜೊತೆ ಸೈಕಲ್ ಓಡಿಸಿದ್ದೇನೆ ಎಂದು ಹೇಳಿದ್ದರು. ಇದು ನನ್ನನ್ನು ಸೈಕಲ್‌ನಲ್ಲಿ ಕಚೇರಿಗೆ ಹೋಗಲು ಪ್ರೇರೇಪಿಸಿತು ಎಂದು ಹೇಳುತ್ತಾ ಕಳೆದ ವರ್ಷ ಸೈಕಲ್‌ನಲ್ಲಿಯೇ ಕಚೇರಿಗೆ ಹೋಗಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.