– ಹಾಲ್ ಟಿಕೆಟ್ ನಲ್ಲಿ ಗಣೇಶನ ದೇವರ ಫೋಟೋ ಹಾಕಿ ಎಡವಟ್ಟು
ಪಾಟ್ನಾ: ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆ ಯಾವ ರೀತಿ ಇದೇ ಎಂದು ಈಗಾಗಲೇ ನಿಮಗೆ ತಿಳಿದಿದೆ. ಇದಕ್ಕೆ ಮತ್ತೊಂದು ಪುರಾವೆಯಂತೆ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಯ ಹಾಲ್ ಟಿಕೆಟ್ ನಲ್ಲಿ ಗಣೇಶ ದೇವರ ಫೋಟೋವನ್ನು ಮುದ್ರಿಸಿ ಎಡವಟ್ಟು ಮಾಡಿದೆ.
ಬಿಹಾರದ ದರ್ಬಂಗಾ ಪ್ರತಿಷ್ಠಿತ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 9 ರಿಂದ ಪ್ರಥಮ ಸೆಮಿಸ್ಟರ್ ಪರೀಕ್ಷೆ ಪ್ರಾರಂಭವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ವಿತರಿಸಿದೆ. ಆದರೆ ಬಿ.ಕಾಂ ವಿದ್ಯಾರ್ಥಿಯೊಬ್ಬನ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಫೋಟೋ ಬದಲು ಗಣೇಶನ ಫೋಟೋ ಹಾಕಿ ಮುದ್ರಿಸಿದೆ.
Advertisement
ಪ್ರಥಮ ವರ್ಷದ ಬಿ.ಕಾಂ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಕೃಷ್ಣ ಕುಮಾರ್ ರಾಯ್ ಎಂಬ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಈ ರೀತಿ ಎಡಟ್ಟು ಆಗಿದೆ. ಎಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ ಎಂದರೆ ಪರೀಕ್ಷಾ ಅಧಿಕಾರಿಗಳು ಈ ಹಾಲ್ ಟಿಕೆಟ್ ಗೆ ಸಹಿ ಕೂಡ ಹಾಕಿದ್ದಾರೆ. ಫೋಟೋ ಎಡವಟ್ಟಿನ ಜೊತೆಗೆ ವಿದ್ಯಾರ್ಥಿಯ ವಿಳಾಸವನ್ನು ಸಹ ತಪ್ಪಾಗಿ ಮುದ್ರಣವಾಗಿದೆ.
Advertisement
ನಾನು ಪರೀಕ್ಷೆಯ ಫಾರ್ಮ್‍ನಲ್ಲಿ ವಿಳಾಸವನ್ನು ಸರಿಯಾಗಿ ಬರೆದು ನನ್ನ ಫೋಟೋವನ್ನೇ ಹಾಕಿದ್ದೆ. ಆದರೆ ಹಾಲ್ ಟಿಕೆಟ್ ನೋಡಿದಾಗ ನನಗೆ ಶಾಕ್ ಆಯ್ತು. ಅದರಲ್ಲಿ ಗಣೇಶನ ಫೋಟೋ ಇತ್ತು. ಇದನ್ನು ನೋಡಿದ ತಕ್ಷಣ ಸರಿ ಮಾಡಿಸಲು ಅಧಿಕಾರಿಗಳ ಬಳಿ ಹೋದೆ. ಅವರು ತಾಂತ್ರಿಕ ಸಮಸ್ಯೆಯಿಂದಾಗಿ ಈ ಗಣೇಶ ಫೋಟೋ ಮುದ್ರಣವಾಗಿದೆ. ನಾವು ತಪ್ಪು ಮಾಡಿಲ್ಲ. ನಾವು ಸೈಬರ್ ಸೆಂಟರ್‍ಗೆ ಪ್ರವೇಶಾತಿ ಪತ್ರಗಳನ್ನು ಸಿದ್ಧ ಪಡಿಸಲು ನೀಡಿದ್ದೇವು. ಅಲ್ಲಿ ಆಗಿರುವ ಎಡವಟ್ಟು ಎಂದು ತಿಳಿಸಿದ್ದಾರೆ ಎಂಬುದಾಗಿ ವಿದ್ಯಾರ್ಥಿ ಕೃಷ್ಣ ಹೇಳಿದ್ದಾನೆ.
Advertisement
ಈ ತಪ್ಪು ಹೇಗಾಯ್ತು ಎನ್ನುವುದನ್ನು ಶೀಘ್ರವಾಗಿ ವಿಚಾರಿಸಿ ಬೇಗ ಇದನ್ನು ಸರಿ ಮಾಡುತ್ತೇವೆ. ಇದರಿಂದ ವಿದ್ಯಾರ್ಥಿಗೆ ಯಾವುದೇ ತೊಂದರೆ ಆಗುವುದಿಲ್ಲ. ಖಚಿತವಾಗಿ ಅವನು ಪರೀಕ್ಷೆಗೆ ಕುಳಿತು ಕೊಳ್ಳುತ್ತಾನೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾ ಅಧಿಕಾರಿ ಕುಲಾನಂದ್ ಯಾದವ್ ಹೇಳಿದ್ದಾರೆ.
Advertisement
ಇದೇ ವರ್ಷ ಕಳೆದ ಜನವರಿಯಲ್ಲಿ ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆಯಲ್ಲಿ ಯುವತಿಯ ಪ್ರವೇಶಾತಿ ಕಾರ್ಡ್‍ನಲ್ಲಿ ಆಕೆಯ ಫೋಟೋ ಬದಲು ಭೋಜ್‍ಪುರಿ ನಟಿಯ ಟಾಪ್‍ಲೆಸ್ ಫೋಟೋವನ್ನು ಹಾಕಿ ಬಿಹಾರ ಮಂಡಳಿ ಕಾರ್ಡ್ ವಿತರಿಸಿತ್ತು.