ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆಗಿಳಿದ ವಿಘ್ನ ನಿವಾರಕ ಗಣೇಶ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಸಂಚಾರ ಪಾಠ ಬೋಧಿಸಿದ್ದಾನೆ.
ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿರ್ವಾಹಣೆ ದಿನಾಚರಣೆ ಅಂಗವಾಗಿ ಮೈಸೂರಿನ ಸಂಚಾರಿ ಪೊಲೀಸರು ಆಯೋಜಿಸಿದ್ದ ವಿಭಿನ್ನ ಹೆಲ್ಮೆಟ್ ಜಾಗೃತಿ ಕುರಿತು ಕಾರ್ಯಕ್ರಮದಲ್ಲಿ ಗಣೇಶ ವೇಷಧಾರಿ ವ್ಯಕ್ತಿ ಎಲ್ಲರ ಗಮನ ಸೆಳೆದರು.
Advertisement
Advertisement
Advertisement
ಹೆಲ್ಮೆಟ್ ಧರಿಸದ ಸವಾರರನ್ನು ತಡೆದು ನಿಲ್ಲಿಸಿದ ಗಣೇಶ ವೇಷಧಾರಿ, ಅವರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಧರಿಸುವಂತೆ ಪಾಠ ಬೋಧಿಸಿದರು. ರಸ್ತೆಯಲ್ಲಿ ಗಣೇಶನನ್ನ ಕಂಡು ಜನರು ಅರೆ ಕ್ಷಣ ತಬ್ಬಿಬ್ಬಾದರು.
Advertisement
ಇತ್ತೀಚಿಗೆ ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸಹ ವಿನೂತನ ಪ್ರಯತ್ನವೊಂದನ್ನು ಮಾಡಿದ್ದರು. ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡುವವರಿಗೆ ಯಮನಿಂದ ವಾರ್ನಿಂಗ್ ಎಂಬ ವಿಶೇಷ ಅಭಿಯಾನವನ್ನು ಬೆಂಗಳೂರು ಹಲಸೂರು ಗೇಟ್ ಸಂಚಾರಿ ಪೊಲೀಸರು ಕೈಗೊಂಡಿದ್ದರು. ಪ್ರಾಣ ಉಳಿಬೇಕು ಅಂದ್ರೆ ಹೆಲ್ಮೆಟ್ ಹಾಕ್ಬೇಕು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕೂತಿರ್ತಾನೆ. ಆ ಮರಣ ದೇವ ರೋಡ್‍ನಲ್ಲಿ ಹೋಗೋರನ್ನು ತಡೆದು ಅವರ ಬೈಕ್, ಸ್ಕೂಟರ್ ಹತ್ತುತ್ತಾನೆ ಅಂತ ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ ಎಚ್ಚರಿಕೆ ನೀಡುವ ಪ್ರಯತ್ನವನ್ನು ನಡೆಸಿದ್ದರು.