ʻಕಾಂತಾರʼ ಹೀರೋ ರಿಷಬ್‌ ಕೈಬಿಟ್ಟ ಸಿನಿಮಾದಲ್ಲಿ ಲೂಸ್ ಮಾದ ಯೋಗಿ

Public TV
1 Min Read
rishab shetty 6

`ಕಾಂತಾರ’ (Kantara) ಸೂಪರ್ ಸಕ್ಸಸ್ ನಂತರ ರಿಷಬ್ ಶೆಟ್ಟಿ (Rishab Shetty) ಇತ್ತೀಚೆಗೆ ರಕ್ಷಿತ್ ನಿರ್ಮಾಣದ `ಬ್ಯಾಚುಲರ್ ಪಾರ್ಟಿ’ (Bachelor Party) ಚಿತ್ರದಿಂದ ಹೊರಬಂದಿದ್ದರು. ರಿಷಬ್ ಕೈಬಿಟ್ಟ ಸಿನಿಮಾಗೆ ಕನ್ನಡದ ಪ್ರತಿಭಾನ್ವಿತ ನಟನನ್ನೇ ಕರೆತರಲಾಗಿದೆ. ಲೂಸ್ ಮಾದ ಯೋಗಿ (Loose Madha Yogi) ಈ ಚಿತ್ರದಲ್ಲಿ ನಟಿಸಲಿದ್ದಾರೆ.

Kantara 5

ರಕ್ಷಿತ್ ಮತ್ತು ರಿಷಬ್ ಒಟ್ಟಿಗೆ ಚಿತ್ರರಂಗಕ್ಕೆ ಕಾಲಿಟ್ಟವರು. ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದವರು. `ಕಿರಿಕ್ ಪಾರ್ಟಿ’ ಅಂತಹ ಸಿನಿಮಾ ಸೂಪರ್ ಹಿಟ್ ಚಿತ್ರವನ್ನ ಕೊಟ್ಟವರು. ಮತ್ತೆ ರಕ್ಷಿತ್ ಶೆಟ್ಟಿ ನಿರ್ಮಾಣದ `ಬ್ಯಾಚುಲರ್ ಪಾರ್ಟಿ’ ಚಿತ್ರಕ್ಕಾಗಿ ಒಂದಾಗಿದ್ದರು. ಆದರೆ ಈಗ ರಿಷಬ್, `ಕಾಂತಾರ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಈ ಚಿತ್ರದ ಸಕ್ಸಸ್ ಬೆನ್ನಲ್ಲೇ ರಕ್ಷಿತ್ ಚಿತ್ರವನ್ನು ರಿಷಬ್ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ

RISHAB SHETTY B

`ಬ್ಯಾಚುಲರ್ ಪಾರ್ಟಿ’ಯಲ್ಲಿ ರಿಷಬ್, ದಿಗಂತ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಇತ್ತೀಚೆಗೆ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿತ್ತು. ಈಗ ರಿಷಬ್ ಕೈಬಿಟ್ಟ ಮೇಲೆ ಅವರ ಪಾತ್ರಕ್ಕೆ ಲೂಸ್ ಮಾದ ಯೋಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ತೆರೆಕಂಡ `ಹೆಡ್‌ಬುಷ್‌’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಯೋಗಿ ಸೈ ಎನಿಸಿಕೊಂಡಿದ್ದರು.

Loose Mada Yogi

ಕಾಂತಾರ ಸಿನಿಮಾ ಸಕ್ಸಸ್ ನಂತರ ರಿಷಬ್ ಶೆಟ್ಟಿ, `ಕಾಂತಾರ 2’ಗೆ ಕಥೆ ಬರೆಯಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಈ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ. ಹಾಗಾಗಿ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ರಿಷಬ್ ನಟಿಸಲು ಸಾಧ್ಯವಾಗುತ್ತಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *