ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಿ ಅಭಿಮಾನಿಗಳ ಮುಂದೆ ನಿಂತಿದ್ದಾರೆ ಉಪೇಂದ್ರ. ಈ ಬಾರಿಯೂ ಅವರು ಪ್ರೇಕ್ಷಕನ ಮೆದುಳಿಗೆ ಕೈ ಹಾಕಿದ್ದು, ಈಗಾಗಲೇ ರಿಲೀಸ್ ಆದ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿದ್ದಾರೆ. ಸಿನಿಮಾದ ಟೈಟಲ್ ಇಂಥದ್ದೇ ಅಂತ ಹೇಳುವುದು ಕಷ್ಟ. ಅಲ್ಲದೇ, ನಾನಾ ರೀತಿಯ ಅರ್ಥಗಳು ಹುಟ್ಟುವಂತೆ ಫಸ್ಟ್ ಲುಕ್ ಇತ್ತು. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ
Advertisement
ಇದೀಗ ಅದೇ ಸಿನಿಮಾದ ಮುಹೂರ್ತ ಬೆಂಗಳೂರಿನ ಬನ್ನಿ ಮಹಾಂಕಾಳಿ ದೇವಸ್ಥಾನವೊಂದರಲ್ಲಿ ಜೂ.3 ರಂದು ನಡೆಯಲಿದೆ. ಅಂದು ಹಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರಂತೆ ಉಪ್ಪಿ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲೇ ತಯಾರಾಗುತ್ತಿರುವುದರಿಂದ ಭಾರೀ ಬಜೆಟ್ ನಲ್ಲೇ ನಿರ್ಮಾಣವಾಗಲಿದೆಯಂತೆ. ಎಲ್ಲ ಭಾಷೆಯ ನೋಡುಗರಿಗೂ ಕನೆಕ್ಟ್ ಆಗುವಂತಹ ಕಥೆಯನ್ನೇ ಈ ಚಿತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ
Advertisement
Advertisement
ಮುಹೂರ್ತದ ದಿನದಂದು ಸರ್ಪ್ರೈಸ್ ಕೊಡುವುದಕ್ಕಾಗಿ ಉಪ್ಪಿಯ ಲುಕ್ ಟೆಸ್ಟ್ ಕೂಡ ನಡೆದಿದ್ದು, ಸದ್ಯ ಉಪೇಂದ್ರ ಅವರು ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದಾರೆ. ಲುಕ್ ಟೆಸ್ಟ್ ಮತ್ತು ಫೋಟೋ ಶೂಟ್ ನಲ್ಲಿ ಅವರು ಪಾಲ್ಗೊಂಡಿದ್ದಾರೆ. ಈ ಸಿನಿಮಾದಲ್ಲೂ ಉಪ್ಪಿಯದ್ದು ವಿಭಿನ್ನ ರೀತಿಯ ಗೆಟಪ್ ಇರಲಿದೆಯಂತೆ. ಹಾಗಾಗಿ ಹಲವು ಬಗೆಯಲ್ಲಿ ಲುಕ್ ಟೆಸ್ಟ್ ನಡೆದಿದೆಯಂತೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ
Advertisement
ಲಹರಿ ಫಿಲ್ಮ್ಸ್ ಮತ್ತು ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ನಲ್ಲೂ ಈ ಸಿನಿಮಾ ತಯಾರಾಗಲಿದೆಯಂತೆ. ಉಪೇಂದ್ರ ಅವರ ಹೊರತಾಗಿ, ಸಿನಿಮಾದಲ್ಲಿ ಯಾರೆಲ್ಲ ತಾರೆಯರು ಇರಲಿದ್ದಾರೆ ಎನ್ನುವುದು ಜೂ.3 ರನಂತರ ಗೊತ್ತಾಗಲಿದೆ. ಅಷ್ಟೂ ಭಾಷೆಗೂ ಸಲ್ಲುವಂತಹ ಕಲಾವಿದರ ಆಯ್ಕೆ ಕೂಡ ಆಗಿದೆಯಂತೆ. ಸಿನಿಮಾ ಮುಹೂರ್ತದ ದಿನದಂದು ಹಲವು ವಿಚಾರಗಳನ್ನು ಉಪ್ಪಿ ಹಂಚಿಕೊಳ್ಳಲಿದ್ದಾರೆ.