CinemaDistrictsKarnatakaLatestMain PostSandalwood

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೊತೆ ಇದ್ದ ಹುಡುಗ ಇವರೇ ನೋಡಿ : ರಟ್ಟಾಯ್ತು ಗುಟ್ಟು

ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಹುಡುಗನೊಬ್ಬನ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಹುಡುಗ ಮತ್ತು ಅವರು ತುಂಬಾ ಆತ್ಮೀಯರಾಗಿದ್ದ ಕಾರಣಕ್ಕಾಗಿ ಫೋಟೋ ಸುತ್ತ ನಾನಾ ರೀತಿಯ ಗಾಸಿಪ್ ಗಳು ಎದ್ದಿದ್ದವು. ಆ ಹುಡುಗನು ರಮ್ಯಾ ಅವರ ಸ್ನೇಹಿತನಾ? ಹೊಸ ಪ್ರೇಮಿಯಾ? ಸಂಬಂಧಿಕನಾ? ಹೀಗೆ ನಾನಾ ರೀತಿಯ ಚರ್ಚೆಗಳು ನಡೆದಿದ್ದವು. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

ಆ ಹುಡುಗನ ಜೊತೆಗಿರುವ ರಮ್ಯಾ ಅವರು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಹುಡುಗ ಯಾರು ಎನ್ನುವುದನ್ನು ಸ್ವತಃ ರಮ್ಯಾ ಅವರೇ ಹೇಳಬೇಕು. ಈ ಗುಟ್ಟು ರಟ್ಟು ಮಾಡಬೇಕು ಎಂದೆಲ್ಲ ಅಭಿಮಾನಿಗಳು ಕೇಳಿದ್ದರು. ಆದರೂ, ರಮ್ಯಾ ಮೂರ್ನಾಲ್ಕು ದಿನದಿಂದ ಸುಮ್ಮನೆ ಇದ್ದರು. ಆ ಹುಡುಗ ಯಾರು? ಯಾಕಾಗಿ ಆ ಫೋಟೋ ತಗೆಸಿಕೊಳ್ಳಲಾಗಿದೆ ಎನ್ನುವ ಗುಟ್ಟು ಹಾಗೆಯೇ ಇತ್ತು. ಕೊನೆಗೂ ರಮ್ಯಾ ಇಂದು ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

ಕೆಲವರು ಆ ಹುಡುಗನ ಸಿಕ್ರೇಟ್ ಬಯಲು ಮಾಡಲು ಬೆನ್ನು ಹತ್ತಿದ ವಿಷಯ ತಿಳಿಯುತ್ತಿದ್ದಂತೆಯೇ ಆ ಹುಡುಗನ ಹೆಸರು, ಅವನು ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಸಣ್ಣದೊಂದು ಫೋಟೋ ಇಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದಕ್ಕೆ ಅವರು ಸೊಟ್ಟಗೆ ನಕ್ಕಿದ್ದಾರೆ. ಜೊತೆಗೆ ಆ ಹುಡುಗನ ವಿಷಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

ಹುಡುಗನ ಕುರಿತು ಟ್ವಿಟ್ ಮಾಡಿರುವ ರಮ್ಯಾ ‘ಆ ಹುಡುಗನ ಹೆಸರು ವಿಹಾನ್. ನನ್ನ ಸ್ಟೈಲೀಶ್ ಹುಡುಗ. ಆ ಹುಡುಗನ ಕುರಿತಾದ ನಿಮ್ಮ ಕುತೂಹಲವನ್ನು ಪ್ರೀತಿಸುತ್ತೇನೆ’ ಎಂದು ಕೂಲ್ ಆಗಿ ಉತ್ತರ ಕೊಟ್ಟು, ಅಚ್ಚರಿ ಮೂಡಿಸಿದ್ದಾರೆ.

Leave a Reply

Your email address will not be published.

Back to top button