ಚಿಕ್ಕಬಳ್ಳಾಪುರ: ಹೊಸ ಕಾರು ಖರೀದಿಸಿದ ಖುಷಿಯಲ್ಲಿ ಲಾಂಗ್ ಡ್ರೈವ್ ಅಂತ ಹೈದರಾಬಾದ್‍ನಿಂದ ಬೆಂಗಳೂರಿಗೆ ಆಗಮಿಸಿದ ಮಹಿಳೆಯರ ತಂಡ ಕಳ್ಳತನಕ್ಕೆ ಯತ್ನಿಸಿ ಪೊಲೀಸರಿಗೆ ಸೆರೆ ಸಿಕ್ಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ಪ್ರಕಾಶಂ ಜಿಲ್ಲೆಯ ಸುಮಲತಾ (24), ಅಂಕಮ್ಮ (30), ರಮ್ಯಾ(19) ಇಸ್ಮಾಯಿಲ್ (19) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಲ್ಲಿ ಸುಮಲತಾ ಹಾಗೂ ರಮ್ಯಾ ಇಬ್ಬರು ಸ್ನೇಹಿತೆಯರಾಗಿದ್ದು ಶೋಕಿಗಾಗಿ ಹೊಸ ಕಾರು ಖರೀದಿಸಿದ್ದರು. ಹೈದರಾಬಾದ್ ನಿಂದ ಬೆಂಗಳೂರು ಕಡೆಗೆ ಬಂದಿದ್ದ ಈ ಗ್ಯಾಂಗ್ ಶೋಕಿಗಾಗಿ ಲಾಂಗ್ ಡ್ರೈವ್ ಮಧ್ಯೆ ಹೆದ್ದಾರಿ ಬದಿಗಳಲ್ಲಿ ಸಿಕ್ಕಿ, ಸಿಕ್ಕ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದರು. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್
ದೇವನಹಳ್ಳಿ ಬಳಿ ಬೆಳಗಿನ ಜಾವ ಹೆದ್ದಾರಿ ಬದಿ ಅಂಗಡಿಗೆ ಕನ್ನ ಹಾಕುವ ವೇಳೆ ಬೀಟ್ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಬಂಧಿತರಿಂದ ವ್ಯಾಗನಾರ್ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‍ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ದೇವನಹಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?