ಮೈಸೂರು: ಅರಮನೆ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇನ್ನು ಕೆಲವೇ ಹೊತ್ತಿನಲ್ಲಿ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಬಿಜೆಪಿ ಘಟಕದಿಂದ ವಿಶೇಷ ಉಡುಗೊರೆಯೊಂದು ರೆಡಿಯಾಗಿದೆ.
ಈ ಸಂಬಂಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಮಾ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಒಳಗೊಂಡ ಮರದಲ್ಲಿ ಕೆತ್ತನೆ ಮಾಡಿರುವ ಸುಮಾರು 2 ಅಡಿ ಎತ್ತರ ಇರುವ ಮರದ ಮೂರ್ತಿ ಉಡುಗೊರೆ ನೀಡಲು ತಯಾರಿ ನಡೆಸಲಾಗುತ್ತಿದೆ. ಈ ಮೂರ್ತಿಯು ವಿಶೇಷ ಕುಸುರಿ ಕೆಲಸ ಒಳಗೊಂಡಿದೆ. ಮೂರ್ತಿ ಜೊತೆಗೆ ಮೈಸೂರು ಪೇಟ, ರೇಷ್ಮೆ ಶಲ್ಯ, ಹಾರ ಹಾಕಿ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ರಾಮರಾಜ್ಯ ನಿರ್ಮಾಣದ ಕಲ್ಪನೆಯಲ್ಲಿರುವ ನರೇಂದ್ರ ಮೋದಿ ಅವರಿಗೆ ರಾಮನ ಮೂರ್ತಿ ನೀಡಿ ಗೌರವಿಸುತ್ತಿದ್ದೇವೆ. ಅವರು ಮೈಸೂರು ಭಾಗದ ಪ್ರಚಾರ ನಮಗೆ ಮತ್ತಷ್ಟು ಬೂಸ್ಟ್ ನೀಡಿದೆ. ಈ ಬಾರಿಯೂ ಜನ ಮತ್ತೊಮ್ಮೆ ಮೋದಿ ಎನ್ನುತ್ತಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಪುಷ್ಪವೃಷ್ಟಿಗೆ ಕೋಲಾರದಿಂದ 2 ಟನ್ ಚೆಂಡು ಹೂವು!
Advertisement
Advertisement
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿರುವ ಮೋದಿಯವರು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಓವೆಲ್ ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ ಮೋದಿಯವರು ಕಾರಿನಲ್ಲಿ ಮಹಾರಾಜ ಮೈದಾನಕ್ಕೆ ತೆರಳಲಿದ್ದಾರೆ. ಓವೆಲ್ ಮೈದಾನದಲ್ಲಿ ಈಗಾಗಲೇ ಹೆಲಿಪ್ಯಾಡ್ ಸಿದ್ಧಗೊಂಡಿದ್ದು, ಹೆಲಿಪ್ಯಾಡ್ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.