ನವದೆಹಲಿ: ಲೋಕಸಭಾ ಚುನಾವಣೆಯ ಆರಂಭದಿಂದಲೂ ಪ್ರಧಾನಿ ಮೋದಿ, ಅಬ್ ಕಿ ಬಾರ್ ಚಾರ್ ಸೌ ಪಾರ್ ಕನಸನ್ನು ಪ್ರಚಾರ ಕಣದಲ್ಲಿ ಬಿತ್ತಿದ್ರು. ಈಗ ಇದಕ್ಕೆ ಪೂರಕವಾದ ಅಂಶಗಳು, ಕೆಲ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿವೆ.
ಮೂರು ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳಲ್ಲಿ ಎನ್‍ಡಿಎ ಮೈತ್ರಿಕೂಟ 400ರ ಗಡಿ ದಾಟಿದೆ. ಬಿಜೆಪಿ ಖುಷಿಗೆ ಪಾರವೇ ಇಲ್ಲದಂತಾಗಿದೆ. ಮೋದಿ ಅವಧಿಯಲ್ಲಿ ಬಿಜೆಪಿಗೆ 50%ಕ್ಕಿಂತ ಹೆಚ್ಚು ಮತ ಮತ ಸಿಕ್ತಿದೆ. ಈ ಸಾಧನೆ ನೆಹರೂ, ಇಂದಿರಾ ಕೈಯಲ್ಲೇ ಆಗಿರಲಿಲ್ಲ ಅಂತ ಬಿಜೆಪಿ ಹೇಳಿಕೊಂಡಿದೆ.
Advertisement
Advertisement
ಇದೇ ಹೊತ್ತಲ್ಲಿ ತಮ್ಮ ಅಂದಾಜಿನಂತೆ ಮತಗಟ್ಟೆ ಸಮೀಕ್ಷೆಗಳು ಬಂದಿರೋದ್ರೀಂದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಖುಷಿಯಾಗಿದ್ದಾರೆ. ತಮ್ಮನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ನಾಲಗೆ ಹರಿಬಿಡುವ ರಾಜಕೀಯ ನಾಯಕರು. ಸ್ವಯಂ ಘೋಷಿತ ಸೋಷಿಯಲ್ ಮೀಡಿಯಾ ಮೇಧಾವಿಗಳ ನಿಷ್ಪ್ರಯೋಜಕ ಚರ್ಚೆ, ವಿಶ್ಲೇಷಣೆಗಳಿಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಅಂತ ಜನರಿಗೆ ಪ್ರಶಾಂತ್ ಕಿಶೋರ್ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
Advertisement
400 ಪಾರ್ ಭವಿಷ್ಯ ನುಡಿದ ಸಮೀಕ್ಷೆಗಳು
ಆಕ್ಸಿಸ್ ಮೈ ಇಂಡಿಯಾ (ಇಂಡಿಯಾ ಟುಡೇ)
* ಎನ್‍ಡಿಎ- 361-401
* ಐಎನ್‍ಡಿಐಎ- 131-166
* ಇತರರು- 08-20
Advertisement
ಸಿಎನ್‍ಎಕ್ಸ್ (ಇಂಡಿಯಾ ಟಿವಿ)
* ಎನ್‍ಡಿಎ- 371-401
* ಐಎನ್‍ಡಿಐಎ- 109-139
* ಇತರೆ- 28-38
ಟುಡೇಸ್ ಚಾಣಕ್ಯ
* ಎನ್‍ಡಿಎ- 385-415
* ಐಎನ್‍ಡಿಐಎ- 96-118
* ಇತರೆ-27-45