ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋತು ಜೀವನದಲ್ಲಿ ಗೆದ್ದವರು!

Public TV
2 Min Read
SHIVARAM KARANT ANANTNAG

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ (Uttara Kannada Loksabha Constituency) ತನ್ನದೇ ಆದ ಮಹತ್ವ ಹೊಂದಿದೆ. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಯಿಂದ ಹಿಡಿದು ದೊಡ್ಡ ದೊಡ್ಡ ಸಾಹಿತಿಗಳು, ಖ್ಯಾತ ಚಲನಚಿತ್ರ ನಟರು ಸ್ಪರ್ಧಿಸಿ ಗೆದ್ದು ಸೋತವರಿದ್ದಾರೆ. ಹಾಗಿದ್ರೆ ಇವತ್ತಿನ ಲೋಕಸಭಾ ಇತಿಹಾಸದ ಮಾಹಿತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಕನ್ನಡದ ಖ್ಯಾತ ನಟ ಅನಂತನಾಗ್ ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ್ ಕಾರಂತರ ಬಗ್ಗೆ ತಿಳಿದುಕೊಳ್ಳೋಣ.

SHIVARAM KARANT

ಹೌದು. ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಿಂದ ಖ್ಯಾತ ಚಲನಚಿತ್ರ ನಟ ಅನಂತ್ ನಾಗ್ ಹಾಗೂ ಸಾಹಿತಿ ಶಿವರಾಮ್ ಕಾರಂತ್ ಸ್ಪರ್ಧೆ ಮಾಡಿದ್ದರು. ಅದು 1989 ಲೋಕಸಭಾ ಚುನಾವಣೆ. ಹೊನ್ನಾವರ ಮೂಲದ ಖ್ಯಾತ ನಟ ಅನಂತ್ ನಾಗ್ ಚಲನಚಿತ್ರದ ಮೂಲಕ ಖ್ಯಾತಿ ಗಳಿಸಿ ಉತ್ತುಂಗದಲ್ಲಿದ್ದರು. ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪ್ರಭಾವದಲ್ಲಿ ಜನತಾದಳದಲ್ಲಿ ಗುರುತಿಸಿಕೊಂಡಿದ್ದ ಅನಂತನಾಗ್ ಮಹತ್ವದ ಆಕಾಂಕ್ಷಿ ಹೊಂದಿದ್ದವರು.

ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರಿಂದ ರಾಜಕೀಯದಲ್ಲೂ ತನ್ನ ಛಾಪು ಒತ್ತಲು ಜನತಾದಳವನ್ನು ಆಯ್ಕೆ ಮಾಡಿಕೊಂಡಿದ್ದ ಅವರು, ರಾಮಕೃಷ್ಣ ಹೆಗಡೆ ಹಾಗೂ ಜೆ.ಹೆಚ್ ಪಟೇಲ್‌ರ ಅಣತಿಯಂತೆ ಉತ್ತರ ಕನ್ನಡ ಜಿಲ್ಲೆಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಲ್ಪ ಮತದಲ್ಲಿ ಸೋತ ಅವರು ದೊಡ್ಡ ಮತಗಳನ್ನು ಗಳಿಸುವಲ್ಲಿ ಯಶಸ್ಸು ಕಂಡಿದ್ದರು. ಒಂದು ವೇಳೆ ಅವರು ಆ ಸಂದರ್ಭದಲ್ಲಿ ಗೆದ್ದಿದ್ದರೇ ಅವರು ಸಕ್ರಿಯ ರಾಜಕಾರಣದಲ್ಲಿ ಈವರೆಗೂ ಇರುತ್ತಿದ್ದರು. ಇದನ್ನೂ ಓದಿ: ಮುಸ್ಲಿಮರ 4% ಮೀಸಲಾತಿ ಮುಂದುವರಿಸೋದಾಗಿ ಬಿಜೆಪಿ ಸುಪ್ರೀಂಗೆ ಹೇಳಿತ್ತು: ಸಿದ್ದರಾಮಯ್ಯ ತಿರುಗೇಟು

ananth nag 2

ಇನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ್ ಕಾರಂತರು ಸಹ ಆ ಸಮಯದಲ್ಲಿ ಪರಿಸರ ಹೋರಾಟದ ಮೂಲಕ ಜಿಲ್ಲೆಯಲ್ಲಿ ಹೆಸರು ಗಳಿಸಿದ್ದರು. ಕೈಗಾ ಅಣು ಸ್ಥಾವರ ವಿರೋಧಿ ಹೋರಾಟ ಸೇರಿದಂತೆ ಅನೇಕ ಪರಿಸರ ಹೋರಾಟದಲ್ಲಿ ಜಿಲ್ಲೆಯಲ್ಲಿ ಹೆಸರು ಗಳಿಸಿದ್ದ ಅವರು 1989 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣಾ ಪ್ರಚಾರಕ್ಕೂ ಬಾರದೇ ದೊಡ್ಡ ಅಂತರದಲ್ಲಿ ಸೋತಿದ್ದರು. ಆದ್ರೆ ರಾಜಕೀಯದಲ್ಲಿ ಸೋತ ಈ ದಿಗ್ಗಜರು ವೃತ್ತಿ ಜೀವನದಲ್ಲಿ ಗೆದ್ದು ಜನಮಣ್ಣನೆ ಗಳಿಸಿದ್ದಾರೆ.

1989 ರ ಲೋಕಸಭಾ ಚುನಾವಣೆಯಲ್ಲಿ ಯಾರು ಎಷ್ಟು ಮತ ಗಳಿಸಿದ್ದರು ವಿವರ ಇಲ್ಲಿದೆ.
1) ಕಾಂಗ್ರೆಸ್ – ದೇವರಾಯ ಜಿ.ನಾಯ್ಕ- 2,40,571
2) ಜನತಾದಳ- ಅನಂತನಾಗ್- 2,09,003
3)ಸ್ವತಂತ್ರ- ಶಿವರಾಮ್ ಕಾರಂತ್- 58,903

ಈ ಚುನಾವಣೆಯಲ್ಲಿ ಈ ಹಿಂದೆ ಸಂಸದರಾಗಿದ್ದ ಕಾಂಗ್ರೆಸ್ ನ ದೇವರಾಯ ನಾಯ್ಕ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದರು.

Share This Article