ನವದೆಹಲಿ: ಲೋಕಸಭೆ (Loksabha Election 2024) ಅಭ್ಯರ್ಥಿಗಳ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. 50 ಪರ್ಸೆಂಟ್ ಕ್ಷೇತ್ರಗಳಿಗೆ ಚರ್ಚೆ ಮಾಡಲಾಗಿದೆ. ಆದರೆ ಎಷ್ಟು ಕ್ಷೇತ್ರಗಳು ಅಂತಾ ಹೇಳಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
#WATCH | Delhi: Congress leader Sachin Pilot says, "It was a good discussion. Discussion was held on all the seats. As soon as CEC decides, you will be told. Whatever decision is taken AICC will brief…" pic.twitter.com/8DB875uQkN
— ANI (@ANI) March 7, 2024
Advertisement
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯ ಬಳಿಕ ಪ್ರತಿಕ್ರಿಯಿಸಿದ ಅವರು, ಇವತ್ತು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಬಾಕಿ ಉಳಿದಿದ್ದು ಎಐಸಿಸಿಯವರು ತೀರ್ಮಾನ ಮಾಡ್ತಾರೆ. ಸಿಎಂ ಸಿದ್ದರಾಮಯ್ಯ ಜೂಮ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ರು ಎಂದರು.
Advertisement
Advertisement
ಇದೇ ವೇಳೆ ಸಚಿವ ಕೆ,ಜೆ ಜಾರ್ಜ್ ಮಾತನಾಡಿ, ಕರ್ನಾಟಕದ್ದು ಎಲ್ಲಾ ಚರ್ಚೆಯಾಗಿದೆ. ಸಿಂಗಲ್ ನೇಮ್ ಬಂದಿರುವ ಎಲ್ಲಾ ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಒಂದೆರಡು ದಿನದಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆಗೆ ರಾಜ್ಯ ಬಿಜೆಪಿ ಪಟ್ಟಿ ಬಹುತೇಕ ಫೈನಲ್- ಮಾಜಿ ಸಿಎಂಗಳ ಸ್ಪರ್ಧೆ ಬಗ್ಗೆ ಸಸ್ಪೆನ್ಸ್
Advertisement
ಸಭೆಯಲ್ಲಿ ಸೋನಿಯಗಾಂಧಿ, ಕೆ.ಸಿ ವೇಣುಗೋಪಾಲ್, ಉತ್ತಮ್ ಕುಮಾರ್ ರೆಡ್ಡಿ, ಅಂಬಿಕಾ ಸೋನಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.