– ಇದು ಆಕಸ್ಮಿಕವೋ?, ನಾಯಕತ್ವ ಬದಲಾವಣೆ ಸುಳಿವೋ?
ಮಂಡ್ಯ: ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಅವರ ಸ್ಥಾನದಲ್ಲಿ ಡಿ.ಕೆ ಶಿವಕುಮಾರ್ ಬರಬಹುದು ಎಂದು ಈ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಚರ್ಚೆ ನಡೆಯುತ್ತಿದೆ. ಇದಕ್ಕೆ ಇಂದು ಮಾಲೂರು ಸಮಾವೇಶದಲ್ಲಿ ರಾಹುಲ್ ಗಾಂಧಿ ಆಡಿದ ಮಾತು ಪೂರಕವಾಗಿರುವಂತೆ ಕಾಣ್ತಿದೆ.
Advertisement
ರಾಹುಲ್ ಗಾಂಧಿ ತಮ್ಮ ಭಾಷಣದ ಆರಂಭದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಪಕ್ಷದ ಅಧ್ಯಕ್ಷರೆಂದು, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸಿದ್ದಾರೆ. ಈ ವೇಳೆ ಸಿಎಂ-ಡಿಸಿಎಂ ಇಬ್ಬರೂ ವೇದಿಕೆಯಲ್ಲೇ ಇದ್ದರು. ಮುದ್ರಿತ ಪ್ರತಿಯನ್ನು ನೋಡಿಕೊಂಡು ರಾಹುಲ್ ಭಾಷಣ ಮಾಡ್ತಾ ಇದ್ದರು. ಹೀಗಾಗಿ ಭಾಷಣ ಸಿದ್ಧಪಡಿಸುವವರೇ ಮಿಸ್ಟೇಕ್ ಮಾಡಿದ್ರೋ? ಅಥವಾ ಬೈ ಮಿಸ್ಟೇಕ್ ಆಗಿ ರಾಹುಲ್ ಗಾಂಧಿ (Rahul Gandhi) ಹೀಗೆ ಹೇಳಿದ್ರೋ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ: ರಾಹುಲ್ ಘೋಷಣೆ
Advertisement
Advertisement
ಒಟ್ಟಿನಲ್ಲಿ ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಭಾಷಣವೀಗ ವಿಪಕ್ಷಗಳಿಗೆ ಆಹಾರವಾಗುವ ಸರ್ವ ಲಕ್ಷಣಗಳು ಕಾಣ್ತಿವೆ. ಈ ಮಧ್ಯೆ ಚುನಾವಣೆ ಮುಗಿದ 15 ದಿನದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುವ ಪ್ಲಾನ್ ಮಾಡಿದ್ದಾರೆ ಎಂದು ಬಿಜೆಪಿಯ ಯತ್ನಾಳ್ ಹೇಳಿದ್ದಾರೆ. ಮತ್ತೊಂದೆಡೆ ಕರ್ನಾಟಕದಲ್ಲಿ ಶೀಘ್ರವೇ ಡಬಲ್ ಎಂಜಿನ್ ಸರ್ಕಾರ ಬರುತ್ತೆ ಎಂದು ಗೋವಾ ಸಿಎಂ ಹೇಳಿದ್ದಾರೆ. ಇದನ್ನೂ ಓದಿ: 56 ಇಂಚಿನ ಎದೆ ಇರೋ ಮೋದಿ ಮಣಿಪುರದ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತಾಡಲಿಲ್ಲ: ಹರಿಪ್ರಸಾದ್
Advertisement
ರಾಹುಲ್ ಗಾಂಧಿ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ರು. ಮಂಡ್ಯ ಮತ್ತು ಮಾಲೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ರಾಜ್ಯದ ಹೆಣ್ಮಕ್ಕಳಿಗೆ ಗೃಹಲಕ್ಷ್ಮಿಯ ಹಣದ ಜೊತೆಗೆ 1 ಲಕ್ಷ ಹಣವನ್ನು ನೀಡ್ತೇವೆ ಎಂಬ ಭರವಸೆ ನೀಡಿದ್ರು. ಗ್ರಾಮಾಂತರ ಬಿಟ್ಟು ಮಂಡ್ಯಗೆ ಬಂದ ಕುಮಾರಸ್ವಾಮಿ ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ರು. ಎಐಸಿಸಿ ಅಧ್ಯಕ್ಷರಂತೂ ಏಕವಚನದಲ್ಲೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.