ನವದೆಹಲಿ: ರಾಷ್ಟ್ರ ರಾಜಕೀಯದಲ್ಲಿ ಈಗ ಸೀಟ್ ಪಾಲಿಟಿಕ್ಸ್ ನಡೆದಿದೆ. ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂಬ ವಿಚಾರದಲ್ಲಿ ಟಾಕ್ ವಾರ್ ನಡೆದಿದೆ. ಕಾಂಗ್ರೆಸ್ ಪಕ್ಷ 50 ಸ್ಥಾನ ಕೂಡ ಗಳಿಸಲ್ಲ. ವಿಪಕ್ಷ ಸ್ಥಾನವನ್ನು ಗಳಿಸಲ್ಲ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ.
ಇದಕ್ಕೆ ಕಾಂಗ್ರೆಸ್ (Congress) ಕೂಡ ಕೌಂಟರ್ ನೀಡಿದೆ. ಬಿಜೆಪಿ 180 ಸ್ಥಾನ ಕೂಡ ಗಳಿಸಲ್ಲ. ಮೋದಿ (Narendra Modi) ಮತ್ತೊಮ್ಮೆ ಪ್ರಧಾನಿಯಾಗಲ್ಲ ಎಂದು ರಾಹುಲ್ ಗಾಂಧಿ (Rahul Gandhi) ತಿರುಗೇಟು ನೀಡಿದ್ದಾರೆ. ಅಲ್ಲದೇ ನರೇಂದ್ರ ಮೋದಿ ಪ್ರಧಾನಿಯಲ್ಲ. ರಾಜನಂತೆ ವರ್ತಿಸ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿ, ಮೇಲಕ್ಕೆ ಏರಿದವರು ಕೆಳಗೆ ಇಳಿಯಲೇಬೇಕು. ಯಾರು ಯಾರನ್ನು ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವ್ರಂತೂ, ಬಿಜೆಪಿಯ ಅಲಿಖಿತ ನಿಯಮದ ಪ್ರಕಾರ 75 ವರ್ಷ ಆದವರು ನಿವೃತ್ತಿ ಪಡೀಬೇಕು. ಅದರಂತೆ ಮೋದಿ 75 ವರ್ಷ ಆದ್ಮೇಲೆ ರಾಜಕೀಯ ನಿವೃತ್ತಿ ಪಡೀತಾರಾ ಎಂದು ಸವಾಲು ಹಾಕಿದ್ದಾರೆ.
ಮೋದಿ ಮತ್ತೊಮ್ಮೆ ಗೆದ್ರೆ ಯುಪಿ ಸಿಎಂ ಯೋಗಿಯನ್ನು (Yogi Adityanath) ಸೈಡ್‍ಲೈನ್ ಮಾಡ್ತಾರೆ. ಅಮಿತ್ ಶಾಗಾಗಿಯೇ (Amitshah) ಮೋದಿ ವೋಟ್ ಕೇಳ್ತಿದ್ದಾರೆ ಎಂಬ ಬಾಂಬ್ ಸಿಡಿಸಿದ್ದಾರೆ. ಈ ಬೆನ್ನಲ್ಲೇ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. 75 ವರ್ಷಕ್ಕೆ ಮೋದಿ ನಿವೃತ್ತಿಯಾಗಲ್ಲ.. ಈ ವಿಚಾರವನ್ನು ಮೊದಲೇ ತಿಳಿಸಿದ್ದೇವೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮೋದಿಗೆ 75 ವರ್ಷವಾದ್ರೂ ಪ್ರಧಾನಿ ಆಗಿಯೇ ಆಗ್ತಾರೆ- ಕೇಜ್ರಿವಾಲ್‌ಗೆ ಅಮಿತ್ ಶಾ ಟಕ್ಕರ್