ಬೆಂಗಳೂರು: ಕಾಂಗ್ರೆಸ್ ಸರ್ಕಾರ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿ ಹಾಳು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (narendra Modi) ವಾಗ್ದಾಳಿ ನಡೆಸಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ಎಲ್ಲಾ ಕಡೆ ಬಜೆಟ್ ಕಡಿತ ಮಾಡಲಾಗ್ತಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ನಡೀತಿದೆ, ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡ್ತಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಬೆಂಗಳೂರು ಸಬರ್ಬನ್ ಪ್ರಾಜೆಕ್ಟ್ ಕೆಲಸ ಶುರುವಾಗಿದೆ. ಸ್ಯಾಟಲೈಟ್ ರಿಂಗ್ ರಸ್ತೆಯ ಲಾಭವೂ ಶೀಘ್ರದಲ್ಲಿ ಸಿಗಲಿದೆ. ಮೇಡ್ ಇನ್ ಇಂಡಿಯಾಕ್ಕೂ ಬೆಂಗಳೂರು ಕೊಡುಗೆ ಅಪಾರ. ಕರ್ನಾಟಕಕ್ಕೂ ಬುಲೆಟ್ ಟ್ರೈನ್ ಬರಲಿದೆ ಎಂದು ಭರವಸೆ ನೀಡಿದರು. ಬೆಂಗಳೂರು ಡಿಜಿಟಲ್ ಇಂಡಿಯಾದ ಹಬ್. ಡಿಜಿಟಲ್ ವೇದಿಕೆಯಲ್ಲಿ ಬೆಂಗಳೂರು ಪಾತ್ರ ದೊಡ್ಡದು. ಮೊಬೈಲ್ ಡೇಟಾ 2014 ರಲ್ಲಿ ಒಂದು ಜಿಬಿ ಗೆ 250 ರೂ. ಇತ್ತು, ಈಗ 10 ರೂ. ಮೊಬೈಲ್ ಬಿಲ್ ಈಗ 500 ರೂಗಿಂತ ಕಮ್ಮಿ ಬರ್ತಿದೆ, ಇದರಿಂದ ಐದಾರು ಸಾವಿರ ಉಳೀತಿದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ 28 ಸ್ಥಾನ ಗೆಲ್ಲಿಸೋಣ, ಆಮೇಲೆ ಕಾವೇರಿ, ಕೃಷ್ಣ ನೀರು ಕೊಡಿ ಅಂತ ಮೋದಿಯನ್ನ ಕೇಳೋಣ: ದೇವೇಗೌಡ
Advertisement
ಜನರ 1 ಮತದಿಂದ ಬದಲಾವಣೆ: ಹಿಂದೆ ದೇಶ ಆರ್ಥಿಕ ಸಂಕಷ್ಟದಲ್ಲಿತ್ತು. ಬ್ಯಾಂಕ್ ಗಳು ಮುಳುಗುವ ಭೀತಿ ಎದುರಿಸುತ್ತಿದ್ದವು. ಅದು ಆ ಕಾಲ, ಈಗ ಕಾಲ ಬದಲಾಗಿದೆ. ಅನ್ಯ ದೇಶಗಳು ಭಾರತದ ಗೆಳೆತನ ಮಾಡಲು ಹಾತಿರೆಯುತ್ತಿವೆ. ಬಂಡವಾಳ ಹೂಡಲು ಉತ್ಸುಕವಾಗಿವೆ. ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕ ದೇಶ. ಭಾರತ ಯಾರನ್ನೂ ಅನುಸರಿಸುತ್ತಿಲ್ಲ, ಭಾರತವನ್ನ ಬೇರೆಯವರು ಅನುಸರಿಸ್ತಿದ್ದಾರೆ. ದೇಶದಲ್ಲಿ ಇಷ್ಟೊಂದು ಬದಲಾವಣೆ ಆಗಿದ್ದು ಹೇಗೆ? ಯಾರಿಂದ?. ಈ ಬದಲಾವಣೆ ಜನರ ಒಂದು ಮತದಿಂದ ಬಂತು ಎಂದರು.
Advertisement
ಮೋದಿ ಕಾರಣದಿಂದಲೇ ಚಂದ್ರಯಾನ ಬಳಿಕ ಗಗನಯಾತ್ರೆಯ ಗೌರವ ಸಿಕ್ಕಿದೆ. ಕಾಂಗ್ರೆಸ್ ಬಂಡವಾಳ ಹೂಡಿಕೆಯ ವಿರುದ್ಧ ಇದೆ. ಮೋದಿ ವಿರುದ್ಧ ಸುಳ್ಳು ಆರೋಪ ಮಾಡಲಾಗ್ತಿದೆ. ಮೋದಿ ಪರಿವಾರದ ವಿರುದ್ಧ ಸುಳ್ಳು ಪ್ರಚಾರ ಮಾಡ್ತಿದ್ದಾರೆ. ಮೋದಿಯನ್ನು ತಿರಸ್ಕರಿಸಿ ಅಂತ ಇಂಡಿಯಾ ಕೂಟ ಹೇಳ್ತಿದೆ ಎಂದು ಇಂಡಿಯಾ ಕೂಟದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ಆಯುಷ್ಮಾನ್ ಯೋಜನೆಯಿಂದ (Ayushman Scheme) ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ. ಬಿಜೆಪಿ ಪ್ರಣಾಳಿಕೆಯಲ್ಲಿ ಈ ಯೋಜನೆ ವಿಸ್ತರಣೆ ಮಾಡಿದ್ದೇವೆ. ಹಿರಿಯರಿಗೂ ಆಯುಷ್ಮಾನ್ ಯೋಜನೆಯ ಲಾಭ ಸಿಗಲಿದೆ. ಜನೌಷಧ ಕೇಂದ್ರಗಳಲ್ಲಿ 80% ಕಡಿಮೆ ದರದಲ್ಲಿ ಔಷಧ ಕೊಡಲಾಗ್ತಿದೆ. ಬಡವರಿಗೆ ಒಂದು ಕೋಟಿ ಮನೆ ಕೊಡಲಾಗಿದೆ. 84 ಸಾವಿರ ಮನೆಗಳು ಬೆಂಗಳೂರಿಗೆ ಸಿಕ್ಕಿವೆ. ಮಧ್ಯಮ ವರ್ಗದ ಮನೆಗಳ ಕನಸು ನನಸು ಮಾಡಿದ್ದೇವೆ. ಜನರ ಒಳಿತಿಗಾಗಿ ರೇರಾ ಕಾಯ್ದೆ ಜಾರಿಯಾಗಿದೆ. ಏಳು ಲಕ್ಷದವರೆಗೆ ಈಗ ತೆರಿಗೆ ಕಟ್ಟುವಂತಿಲ್ಲ. ಹತ್ತು ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಜಿಎಸ್‍ಟಿ ಬಂದ ನಂತರ ಪರೋಕ್ಷ ತೆರಿಗೆಗೆ ತೆರೆ ಬಿದ್ದಿದೆ. ಎಲ್‍ಇಡಿ ಬಲ್ಪ್ 400 ಇತ್ತು, ಈಗ 40 ರೂ ಆಗಿದೆ. ಎಲ್‍ಇಡಿ ಬಲ್ಬ್ ಗಳಿಂದ ಹೆಚ್ಚು ಬೆಳಕು ಸಿಕ್ತಿದೆ ಎಂದು ಮೋದಿ ತಿಳಿಸಿದರು.