ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತವರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ (narendra Modi) ಎಂಟ್ರಿ ಕೊಟ್ಟಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ಬಿಜೆಪಿ ನಾಯಕರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅಲ್ಲಿಂದ ಮೋದಿಯವರು ಹೆಲಿಕಾಪ್ಟರ್ ಮೂಲಕ ಓವೆಲ್ ಮೈದಾನಕ್ಕೆ ಆಗಮಿಸಿ ಬಳಿಕ ಕಾರಿನಲ್ಲಿ ಮಹಾರಾಜ ಮೈದಾನಕ್ಕೆ ಬಂದಿದ್ದಾರೆ.
Advertisement
Advertisement
ವೇದಿಕೆಗೆ ಆಗಮಿಸಿದ ಪ್ರಧಾನಿಯವರಿಗೆ ವಿಶೇಷ ಉಡುಗೊರೆಯ ಮೂಲಕ ಸ್ವಾಗತಿಸಲಾಯಿತು. ರಾಮಾ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಒಳಗೊಂಡ ಮರದಲ್ಲಿ ಕೆತ್ತನೆ ಮಾಡಿರುವ ಸುಮಾರು 2 ಅಡಿ ಎತ್ತರ ಇರುವ ಮರದ ಮೂರ್ತಿ ಉಡುಗೊರೆ ನೀಡಿದ್ದಾರೆ. ಈ ಮೂರ್ತಿಯು ವಿಶೇಷ ಕುಸುರಿ ಕೆಲಸ ಒಳಗೊಂಡಿದೆ. ಮೂರ್ತಿ ಜೊತೆಗೆ ಮೈಸೂರು ಪೇಟ, ರೇಷ್ಮೆ ಶಲ್ಯ, ಹಾರ ಹಾಕಿ ಸನ್ಮಾನ ಮಾಡಲಾಯಿತು. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಪುಷ್ಪವೃಷ್ಟಿಗೆ ಕೋಲಾರದಿಂದ 2 ಟನ್ ಚೆಂಡು ಹೂವು!