ಬೆಂಗಳೂರು: ಯಾರು ಕುಕ್ಕರ್, ತವಾ ಏನೇ ಹಂಚಿದ್ರೂ, ವಿಸಿಲ್ ಕೂಗೋದು ಮಾತ್ರ ಮೋದಿ. ಡಿಕೆ ಸುರೇಶ್ ಗೆ ಯಾಕೆ ಮತ ಹಾಕ್ತಾರೆ ಜನ?. ಅವರು ಏನು ಕೆಲಸ ಮಾಡಿದ್ದಾರೆ ಎಂದು ಶಾಸಕ ಅಶ್ವಥ್ ನಾರಾಯಣ್ (Ashwath Narayan) ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ (Para Military) ನಿಯೋಜನೆ ಆಗಬೇಕು. ಭಯದ ವಾತಾವರಣ ಇರಬಾರದು, ಭಯ ಇಲ್ಲದೇ ಜನ ಮತ ಹಾಗಬೇಕು. ಶಾಂತಿಯುತ ಮತದಾನ ಆಗಬೇಕು. ಈ ಕಾರಣಕ್ಕೆ ನಾವು ಪ್ಯಾರಾ ಮಿಲಿಟರಿ ದಳ ನಿಯೋಜನೆಗೆ ಕೇಳಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ (Congress) ಭಯದ ವಾತಾವರಣ ಸೃಷ್ಟಿಸ್ತಿದೆ. ಭಯದ ವಾತಾವರಣ ಇದ್ರೇನೇ ಅವರಿಗೆ ಶಕ್ತಿ. ಜನರನ್ನ ಹತ್ತಿಕ್ಕುವುದು, ಗಲಾಟೆ ಸೃಷ್ಟಿಸೋದು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ದೇಶದಲ್ಲಿ ಈಗ ಲೋಕಸಭೆ ರೂಪದಲ್ಲಿ ಧರ್ಮ ಅಧರ್ಮದ ಯುದ್ಧ ನಡೀತಿದೆ. ದೇಶದ ಜನರ ವಿಶ್ವಾಸ ಗಳಿಸಿರುವ ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿ ಆಗಲೆಂದು ಜನ ಬಯಸಿದ್ದಾರೆ. ಮೋದಿಯವರ ಕೈ ಬಲಪಡಿಸಲು ಎಲ್ಲ 28 ಲೋಕಸಭೆ ಕ್ಷೇತ್ರ ಗೆಲ್ತೇವೆ. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ (BJP- JDS) ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ (Congress) ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು. ಅವರ ವೈಯಕ್ತಿಕ ಪ್ರತಿಷ್ಠೆ ಜನಕ್ಕೆ ಗೊತ್ತಿದೆ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಫೈನಲ್
Advertisement
Advertisement
ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು ನಮ್ಮ ಅಭ್ಯರ್ಥಿ ಆಗ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ. ಅವರು ನಮ್ಮ ಅಭ್ಯರ್ಥಿ ಆಗಿದ್ದು ಪ್ರಕೃತಿ ನಿಯಮ ಅನ್ನಬಹುದು. ಯೋಗ್ಯ, ಜನಪ್ರಿಯ, ಜನರ ಧ್ವನಿಯಾಗಿ ಇರುವ ಮಂಜುನಾಥ್ ಅವರ ಮೇಲೆ ಪ್ರಕೃತಿಯ ಆಶೀರ್ವಾದ ಇದೆ. ಡಾ.ಮಂಜುನಾಥ್ ಅಂಥ ಯೋಗ್ಯ ಅಭ್ಯರ್ಥಿ ಎಂದು ಅಶ್ವಥ್ ನಾರಾಯಣ್ ಹೇಳಿದರು.
ಎನ್‍ಡಿಎಯಿಂದ ಮಾತ್ರ ದೇಶಕ್ಕೆ ಸುಭದ್ರ ಸರ್ಕಾರ. ಸುಭದ್ರ ಸರ್ಕಾರ ಕೊಡಲು ಯುಪಿಎಯಿಂದ ಆಗಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಗ್ಯಾರಂಟಿಗಳನ್ನು ಮುಂದಿಟ್ಕೊಂಡು, ಸುಳ್ಳು ಹೇಳಿಕೊಂಡು ಕಾಂಗ್ರೆಸ್ ಮತ ಕೇಳ್ತಿದೆ. ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ ಬ್ರದರ್ಸ್ ಕೊಡುಗೆ ಏನು?. ಯಾವುದೇ ಕ್ಷೇತ್ರದಲ್ಲೂ ಅವರು ಕೆಲಸ ಮಾಡಿಲ್ಲ. ಕನಕಪುರ ಅತ್ಯಂತ ಹಿಂದುಳಿದ ತಾಲೂಕು ಆಗಿದೆ ಎಂದರು.