ಮೈಸೂರು: ರಾಜ್ಯ ಚುನಾವಣಾ ಅಖಾಡಕ್ಕೆ ಪ್ರಧಾನಿ ಮೋದಿ ಅದ್ಧೂರಿ ಪ್ರವೇಶವಾಗಿದೆ. ಒಂದೇ ದಿನ ಮೈಸೂರಿನಲ್ಲಿ ರ್ಯಾಲಿ, ಮಂಗಳೂರಿನಲ್ಲಿ ರೋಡ್ ಶೋ ನಡೆಸಿ ಅಬ್ಬರಿಸಿ ನಿರ್ಗಮಿಸಿದ್ದಾರೆ. ಮೋದಿ ಇದ್ದ ವೇದಿಕೆಯಲ್ಲಿ ದೇವೇಗೌಡರು (HD Devegowda) ಕೂಡ ಆರ್ಭಟಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಫೋನ್ ಟ್ಯಾಪಿಂಗ್, ಒಕ್ಕಲಿಗರ ಮಠ ಒಡೆದ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ರೋಷಾವೇಶದಿಂದ ವಾಗ್ದಾಳಿ ನಡೆಸಿದ್ದಾರೆ.
Advertisement
ಮೈಸೂರಿನಲ್ಲಿ ನಡೆದ ದೋಸ್ತಿ ಪಕ್ಷಗಳ ಸಮಾವೇಶದಲ್ಲಿ ಪ್ರಧಾನಿ ಮೋದಿಯನ್ನು (Narendra Modi) ಕೊಂಡಾಡಿದ ಮಾಜಿ ಪ್ರಧಾನಿ ದೇವೇಗೌಡರು, ದೇಶಕ್ಕೆ ಕೀರ್ತಿ ತಂದು ಕೊಟ್ಟ ನಾಯಕ ಮೋದಿ. ಬುದ್ದಿಯಿದ್ದೇ ಮೋದಿ ಜೊತೆ ಹೋಗಲು ಕುಮಾರಸ್ವಾಮಿಗೆ ಹೇಳಿದ್ದೇನೆ. 64 ವರ್ಷದ ರಾಜಕೀಯ ಜೀವನದಲ್ಲಿ ಇಂಥ ರಾಜ್ಯ ಸರ್ಕಾರವನ್ನು ನೋಡಿಲ್ಲ. ಎಲ್ಲಾ ಕಡೆ ಬಾಚೋದೇ ಬಾಚೋದು. ಈ ರಾಷ್ಟ್ರಕ್ಕೆ ಗೌರವ ತಂದು ಕೊಟ್ಟ ದೊಡ್ಡ ವ್ಯಕ್ತಿ ಅಂದರೆ ಅದು ಮೋದಿ ಎಂದು ಹೇಳಿದರು.
Advertisement
Advertisement
ಇಬ್ಬರು ಮಹಾನುಭವರು ಈ ರಾಜ್ಯ ಆಳುತ್ತಿದ್ದಾರೆ. ಆ ಪುಣ್ಯಾತ್ಮರಿಗೆ ನಮೋ ನಮಃ. ಒಬ್ಬ 6 ಕೋಟಿಯ ಜನರ ಮುಖ್ಯಮಂತ್ರಿ 100 ಕೋಟಿ ಜನರ ಪ್ರಧಾನಿ ಬಗ್ಗೆ ಏನೇನೂ ಮಾತಾಡುತ್ತಾರೆ ನೀವು ನೋಡುತ್ತಿದ್ದಿರಾ. ನನಗೆ 3 ಕ್ಷೇತ್ರ ಅಲ್ಲ 28 ಕ್ಷೇತ್ರವೂ ಮುಖ್ಯ. ಯಡಿಯೂರಪ್ಪ (BS Yediyurappa) ಅವರೇ ನೀವು ಎಲ್ಲಿಗೆ ಬೇಕಾದರೂ ಕರೆಯಿರಿ ಬಂದು ಪ್ರಚಾರ ಮಾಡ್ತೀನಿ. ಕನಿಷ್ಠ 24 ಸ್ಥಾನ ನಾವು ಗೆಲ್ಲಬೇಕು. ನಿಮಗೆ ಅಷ್ಟು ಸ್ಥಾನ ಕೊಡ್ತೀವಿ ಅಂತಾ ಮೋದಿಗೆ ದೇವೇಗೌಡರು ಕೈ ಮುಗಿದು ಹೇಳಿದರು.
Advertisement
ಇಂಡಿಯಾ ಒಕ್ಕೂಟದಲ್ಲಿ ದೇಶ ಮುನ್ನಡೆಸುವ ಒಬ್ಬೆ ಒಬ್ಬರು ಇಲ್ಲ. ನನಗೆ ಇಂಡಿಯಾ ಒಕ್ಕೂಟದ ಎಲ್ಲರೂ ನನಗೆ ಗೊತ್ತು ಎಂದು ಹೇಳುವ ಮೂಲಕ ಮೋದಿಯನ್ನು ಹೆಚ್‍ಡಿಡಿ ಹಾಡಿ ಹೊಗಳಿದರು.