ರಾಮನಗರ: ಲೋಕಸಭಾ ಚುನಾವಣೆಯಲ್ಲಿ (Lok sabha Elections 2024) ಈ ಬಾರಿ ಡಿಕೆ ಸುರೇಶ್ (DK Suresh) ಅವರಿಗೆ ಸೋಲಾಗಿದ್ದು, ಈ ಹಿನ್ನೆಲೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಂಸದರು ಭಾವುಕರಾಗಿದ್ದಾರೆ.
ಕನಕಪುರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಡಿಕೆ ಸುರೇಶ್ ಕಣ್ಣೀರು ಹಾಕಿದ್ದಾರೆ. ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ನಿಮ್ಮೆಲ್ಲರಿಗೂ ಒಂದು ಕೊರಗಿತ್ತು. ನಿಮ್ಮ ಮನೆಗೆ ಬರಲ್ಲ ಅಂತಿದ್ರೀ, ಇನ್ಮುಂದೆ ನಿಮ್ಮ ಮನೆಗೂ ಬರ್ತಿನಿ, ನಿಮ್ಮ ಬೀದಿಗೂ ಬರ್ತಿನಿ. ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಜೊತೇಲಿ ಇದ್ದು ಮಾಡ್ತೀನಿ ಎಂದು ಹೇಳಿದರು.
Advertisement
Advertisement
ನಾನು ಬದುಕಬೇಕು, ಬಾಳಬೇಕು ನನ್ನ ಕೆಲಸಾನೂ ನೋಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸವನ್ನೂ ಮಾಡ್ತೀನಿ. ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೇದರಿಕೊಳ್ಳಬೇಡಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ಡಿಕೆ ಸುರೇಶ್ ಗದ್ಗದಿತರಾದರು.
Advertisement
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾಕ್ಟರ್ ಮಂಜುನಾಥ್ ಅವರು ಒಟ್ಟು 10,79,002 ಹಾಗೂ ಡಿ.ಕೆ.ಸುರೇಶ್ 8,09,355 ಮತಗಳನ್ನು ಪಡೆದರು. ಡಾಕ್ಟರ್ ಬರೋಬ್ಬರಿ 2,69,647 ಮತಗಳ ಅಂತರದಿಂದ ಹಾಲಿ ಸಂಸದರನ್ನು ಪರಾಭವಗೊಳಿಸಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಡಿ.ಕೆ.ಸುರೇಶ್‍ಗೆ ನಿರಾಸೆಯಾಗಿದೆ.