ನವದೆಹಲಿ: ಲೋಕಸಭಾ ಚುನಾವಣೆಗೆ (Loksabha Elections 2024) ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ಸಿಇಸಿ ಸಭೆ ನಡೆದಿದೆ. ಇಂದು ಬಿಜೆಪಿ 2ನೇ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದ್ದು, ರಾಜ್ಯದ ಮೊದಲ ಲಿಸ್ಟ್ (BJP Karnataka First List) ಅನೌನ್ಸ್ ಆಗಲಿದೆ.
ಮೊದಲ ಹಂತದಲ್ಲಿ 15 ರಿಂದ 17 ಅಭ್ಯರ್ಥಿಗಳ ಘೋಷಣೆ ಆಗುವ ನಿರೀಕ್ಷೆ ಇದೆ. ಬೆಂಗಳೂರು ಗ್ರಾಮಾಂತರಕ್ಕೆ ಡಾ.ಮಂಜುನಾಥ್ ಬಹುತೇಕ ಖಚಿತ ಎನ್ನಲಾಗಿದೆ. ವಿರೋಧದ ನಡುವೆಯೂ ಶೋಭಾ ಕರಂದ್ಲಾಜೆಗೂ ಟಿಕೆಟ್ ಫಿಕ್ಸ್ ಅಂತ ಹೇಳಲಾಗಿದೆ. ಮೈಸೂರಿನಿಂದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್‍ಗೂ ಟಿಕೆಟ್ ಡೌಟ್ ಎನ್ನಲಾಗಿದೆ. ಈ ನಡುವೆ ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಬೀದರ್, ರಾಯಚೂರು, ಉತ್ತರ ಕನ್ನಡ, ಕೋಲಾರ, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಇನ್ನೂ ಇತ್ಯರ್ಥವಾಗಿಲ್ಲ.
ಸಂಭಾವ್ಯ ಅಭ್ಯರ್ಥಿಗಳು:
ಬೆಂಗಳೂರು ಗ್ರಾಮಾಂತರ- ಡಾ.ಮಂಜುನಾಥ್
ಮೈಸೂರು- ಯದುವೀರ್ ಒಡೆಯರ್
ಬೆಂ. ದಕ್ಷಿಣ -ತೇಜಸ್ವಿ ಸೂರ್ಯ
ಬೆಂ. ಕೇಂದ್ರ- ಪಿ.ಸಿ.ಮೋಹನ್
ಬಳ್ಳಾರಿ- ಶ್ರೀರಾಮುಲು
ಹಾವೇರಿ- ಬಸವರಾಜ ಬೊಮ್ಮಾಯಿ
ಕಲಬುರಗಿ- ಉಮೇಶ್ ಜಾಧವ್
ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
ವಿಜಯಪುರ- ರಮೇಶ್ ಜಿಗಜಿಣಗಿ
ಚಿಕ್ಕೋಡಿ- ಅಣ್ಣಾಸಾಹೇಬ್ ಜೊಲ್ಲೆ
ಶಿವಮೊಗ್ಗ- ಬಿ.ವೈ.ರಾಘವೇಂದ್ರ
ಬೆಳಗಾವಿ- ಜಗದೀಶ್ ಶೆಟ್ಟರ್
ಧಾರವಾಡ- ಪ್ರಲ್ಹಾದ್ ಜೋಶಿ
ಕೊಪ್ಪಳ- ಸಂಗಣ್ಣ ಕರಡಿ
ಒಟ್ಟಿನಲ್ಲಿ ಕಮಲ ವರಿಷ್ಠರಿಗೆ ಸವಾಲಾಗಿದ್ದ ಅಭ್ಯರ್ಥಿ ಆಯ್ಕೆ ಕಗ್ಗಂಟು ಭಾಗಶ: ಕ್ಲಿಯರ್ ಆಗಿದೆ ಎನ್ನಲಾಗಿದೆ. ವಯಸ್ಸು/ಆರೋಗ್ಯ ಕಾರಣಕ್ಕೆ ಕೆಲ ಸಂಸದರಿಗೆ ಟಿಕೆಟ್ ಕೈ ತಪ್ಪುವುದು ಫಿಕ್ಸ್ ಆಗಿದೆ. ಕೆಲವು ಸಂಸದರ ಕಾರ್ಯಕ್ಷಮತೆ, ನಡೆ-ನುಡಿ ಬಗ್ಗೆ ವರಿಷ್ಠರಿಗೆ ತೃಪ್ತಿ ಇಲ್ಲ. ಇನ್ನು ಐದು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಂದ ನಿವೃತ್ತಿ ಘೋಷಣೆ. ಕೆಲವು ಸಂಸದರಿಗೆ ಸ್ಥಳೀಯವಾಗಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಹೆಸರು ಅಂತಿಮ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಡಿಕೆಸು Vs ಡಾ.ಮಂಜುನಾಥ್ ಸ್ಪರ್ಧೆ ಫಿಕ್ಸ್, ಅಧಿಕೃತ ಘೋಷಣೆ ಮಾತ್ರ ಬಾಕಿ – ಜೆಡಿಎಸ್ ಸಭೆಯಲ್ಲಿ ಏನು ಚರ್ಚೆ ನಡೆದಿದೆ?