ನವದೆಹಲಿ: ಶನಿವಾರ ಎಕ್ಸಿಟ್ ಪೋಲ್‌ಗಳು ಬಂದಿವೆ, ಎಲ್ಲಾ ಎಕ್ಸಿಟ್ ಪೋಲ್‌ಗಳು (Exit Poll) ನಕಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.
#WATCH | Delhi CM Arvind Kejriwal says "Exit polls for 2024 Lok Sabha Elections have come out yesterday. Take it in writing, all these exit polls are fake. One exit poll gave 33 seats to BJP in Rajasthan whereas there are only 25 seats there…The real issue is why they had to do… pic.twitter.com/oLkdoxh3ZL
— ANI (@ANI) June 2, 2024
Advertisement
ತಿಹಾರ್ ಜೈಲಿಗೆ ಹೋಗುವ ಮುನ್ನ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಗಳಲ್ಲಿ ಎನ್‌ಡಿಎಗೆ ಬಹುಮತ ಬಂದಿದೆ. ಹೀಗಾಗಿ ಈ ಸಮೀಕ್ಷೆಯನ್ನು ಅವರು ತಿರಸ್ಕರಿಸಿದರು. ಎಲ್ಲಾ ಎಕ್ಸಿಟ್ ಪೋಲ್‌ಗಳು ಖಂಡಿತಾ ಸುಳ್ಳು. ಫಲಿತಾಂಶ 3 ದಿನ ಮುಂಚೆಯೇ ಸುಳ್ಳಿನ ಸಮೀಕ್ಷೆ ಯಾಕೆ ಬೇಕಿತ್ತು?. ಮತಎಣಿಕೆ ವೇಳೆ ಎರಡ್ಮೂರು ಸುತ್ತಿನ ಬಳಿಕ ಎದ್ದು ಹೋಗಬೇಡಿ. ಕೊನೆಯ ಸುತ್ತಿನವರೆಗೂ ಏಜೆಂಟ್‌ಗಳು ಕಾದು ನೋಡಬೇಕು ಎಂದು ಮತದಾನೋತ್ತರ ಸಮೀಕ್ಷೆ ಬಗ್ಗೆ ವ್ಯಂಗ್ಯವಾಡಿದರು.
Advertisement
Advertisement
ನನಗೆ 21 ದಿನಗಳ ಕಾಲಾವಕಾಶ ನೀಡಿದ್ದಕ್ಕೆ ಸುಪ್ರೀಂ ಕೋರ್ಟ್‌ಗೆ ಹೃತ್ಪೂರ್ವಕವಾಗಿ ಧನ್ಯವಾದಗಳು. 21 ದಿನಗಳಲ್ಲಿ ಒಂದು ನಿಮಿಷವೂ ವ್ಯರ್ಥವಾಗಲಿಲ್ಲ. ನಾನು ದೇಶವನ್ನು ಉಳಿಸಲು ಹಗಲಿರುಳು ಪ್ರಚಾರ ಮಾಡಿದ್ದೇನೆ. ನಾನು ಹೇಳಲು ಬಯಸುವುದೇನೆಂದರೆ, ನಿಮ್ಮ ಮಗ ಮತ್ತೆ ಜೈಲಿಗೆ ಹೋಗುತ್ತಾನೆ. ಆದರೆ ನನ್ನ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂದು ಮೋದಿಯವರೇ ಒಪ್ಪಿಕೊಂಡಿದ್ದಾರೆ. ನನ್ನ ಪ್ರತಿ ಹನಿ ರಕ್ತವೂ ದೇಶಕ್ಕಾಗಿರುತ್ತದೆ ಎಂದು ಹೇಳಿದರು.
Advertisement
#WATCH | Delhi CM Arvind Kejriwal says "Supreme Court granted me bail for 21 days to campaign for elections. I want to thank SC for that. Today, I am going to Tihar Jail again. I did not waste even a minute of these 21 days. I did not campaign only for AAP but for various… pic.twitter.com/zfUVw2X4Qg
— ANI (@ANI) June 2, 2024
ಇದಕ್ಕೂ ಮುನ್ನ ಅಂದರೆ ಮನೆಯಿಂದ ಹೊರಬರುವ ಮೊದಲು ತಂದೆ-ತಾಯಿಯ ಆಶೀರ್ವಾದ ಪಡೆದ ಕೇಜ್ರಿವಾಲ್, ಪತ್ನಿ ಹಾಗೂ ಪಕ್ಷದ ನಾಯಕರೊಂದಿಗೆ ರಾಜ್‌ಘಾಟ್‌ಗೆ ತೆರಳಿದ್ದಾರೆ. ಅಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.