– ಎಲ್ಲಾ 14 ಕ್ಷೇತ್ರಗಳಲ್ಲೂ ಹೊಸ ದಾಖಲೆ
ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಕರ್ನಾಟಕದಲ್ಲಿ ದಾಖಲೆ ಮತದಾನ ಆಗಿದೆ. ಚುನಾವಣೆ ಆರಂಭವಾದಾಗಿನಿಂದ ಇಲ್ಲಿ ತನಕ ನಡೆದ ಎಲ್ಲ ಚುನಾವಣೆಗಳ ದಾಖಲೆಯನ್ನೂ ಮತದಾರ ಅಳಿಸಿದ್ದಾನೆ. ಎರಡನೇ ಹಂತದ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ 71.84% ಮತದಾನವಾಗಿದ್ದು, ಮೊದಲ ಹಂತದ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ ದಾಖಲಾಗಿದ್ದ 69.56% ಮತದಾನವನ್ನ ಉತ್ತರ ಕರ್ನಾಟಕದ ಮತದಾರರು ಹಿಂದಿಕ್ಕಿದ್ದಾರೆ. ಕಳೆದ ಬಾರಿಗಿಂತ 2ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ.
Advertisement
2014ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ 67.73% ಮತದಾನವಾದರೆ, 2019ರಲ್ಲಿ 68.96% ರಷ್ಟು ಮತದಾನವಾಗಿತ್ತು. ಇನ್ನು 2014ರ ಎರಡನೇ ಹಂತದಲ್ಲಿ 66.62 % ಹಾಗೂ 2019ರಲ್ಲಿ 68.65% ಮತದಾನವಾಗಿತ್ತು. ಒಟ್ಟಾರೆಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ 67.20% ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ 68.81% ಮತದಾನವಾಗಿತ್ತು. ಈ ಎರಡೂ ಶೇಕಡವಾರು ಮತದಾನವನ್ನು ನೋಡಿದರೆ ಈ ಬಾರಿ ಶೇಕಡವಾರು ಮತದಾನದಲ್ಲಿ ಹೆಚ್ಚಳವಾಗಿದೆ.
Advertisement
ಲೋಕಸಮರ; ಎಲ್ಲೆಲ್ಲಿ ಎಷ್ಟೆಷ್ಟು ವೋಟಿಂಗ್: