ಬೆಂಗಳೂರು: ಬಹುತೇಕ ಎಲ್ಲಾ ಸಮೀಕ್ಷೆಗಳು ಮೋದಿಯೇ ಮುಂದಿನ ಪ್ರಧಾನಿ ಎಂದು ಹೇಳಿವೆ. ಹಾಗಾದ್ರೆ ಮೋದಿಯನ್ನ ಯಾವೆಲ್ಲ ರಾಜ್ಯಗಳು ಕೈಹಿಡಿದಿವೆ. ಹಾಗೆಯೇ ಯಾವ ಕಾರಣಕ್ಕೆ ಜನ ಮತ್ತೊಮ್ಮೆ ಮೋದಿಯನ್ನ ಆಯ್ಕೆ ಮಾಡಿದ್ರು ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
2019ರ ಲೋಕಸಭಾ ಚುನಾವಣಾ ಹಬ್ಬಕ್ಕೆ ತೆರೆಬಿದ್ದಿದ್ದು, ದೇಶದ ಮುಂದಿನ ಚುಕ್ಕಾಣಿ ಯಾರ ಕೈಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈ ಸಂಬಂಧ ಫಲಿತಾಂಶ ಪೂರ್ವ ಎಕ್ಸಿಟ್ ಪೋಲ್ ಸರ್ವೆಯಿಂದ ಬಿಜೆಪಿಗೆ ಕೊಂಚ ಭರವಸೆ ಮೂಡಿದ್ದು, ಹೆಚ್ಚಿನ ಸರ್ವೆಗಳು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ ಎಂಬ ಭವಿಷ್ಯ ನುಡಿದಿದೆ.
Advertisement
Advertisement
ಮೋದಿ ಕೈ ಹಿಡಿದ ರಾಜ್ಯಗಳು!
ಸಮೀಕ್ಷೆಯ ಪ್ರಕಾರ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಗುಜರಾತ್, ಕರ್ನಾಟಕ, ರಾಜಸ್ಥಾನ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಒಡಿಶಾ, ದೆಹಲಿ ರಾಜ್ಯಗಳು ಈ ಬಾರಿ ಮೋದಿ ಕೈ ಹಿಡಿಯುವ ಸಾಧ್ಯತೆ ಇದೆ.
Advertisement
ಪ್ರಧಾನಿಗೆ ಕೈಕೊಟ್ಟ ರಾಜ್ಯಗಳು!
ಬಿಜೆಪಿ ಪ್ರಾಬಲ್ಯವಿದ್ದ ಉತ್ತರಪ್ರದೇಶ ಈ ಬಾರಿ ಮೋದಿಗೆ ಕೈಕೊಡಲಿದೆ. ಪ್ರಾದೇಶಿಕ ಪ್ರಾಬಲ್ಯವಿರುವ ಕೇರಳ, ತಮಿಳುನಾಡು ಕೂಡ ಬಿಜೆಪಿಗೆ ಕೈಕೊಡಲಿದೆ ಎಂಬುದಾಗಿ ತಿಳಿದುಬಂದಿದೆ.
Advertisement
ಬಹುಪರಾಕ್ ಯಾಕೆ?:
ಮೊದಲಿಗೆ ಆಡಳಿತ ವಿರೋಧಿ ಅಲೆ ಇಲ್ಲದೇ ಇದ್ದದ್ದು, ಸರ್ಜಿಕಲ್ ಸ್ಟ್ರೈಕ್, ಏರ್‍ಸ್ಟ್ರೈಕ್, ಭ್ರಷ್ಟಾಚಾರ ನಿಯಂತ್ರಣ, ಕಪ್ಪು ಹಣ ನಿಯಂತ್ರಣ, ಜನ್‍ಧನ್, ಉಜ್ವಲ, ಆಯುಷ್ಮಾನ್ ಭಾರತದಂತಹ ಜನಪರ ಯೋಜನೆಗಳು, ಸಣ್ಣ ರೈತರಿಗೆ ಆರ್ಥಿಕ ನೆರವಿನ ಭರವಸೆ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಮೀಸಲಾತಿ ನೀಡಿದ್ದು ಮೋದಿಯನ್ನ ಕೈಹಿಡಿದಿದೆ.
ಮೋದಿ ಬೆಂಬಲಕ್ಕೆ ಧಾವಿಸಬಹುದಾದ ಪಕ್ಷಗಳು?
ಟಿಆರ್‍ಡಿಎಸ್, ವೈಎಸ್‍ಆರ್‍ಸಿಪಿ, ಬಿಜೆಪಿ ಮೋದಿ ಬೆಂಬಲಕ್ಕೆ ಧಾವಿಸುವ ಸಾಧ್ಯತೆ ಇದೆ. ಒಟ್ಟಾರೆ, ಲೋಕಸಭಾ ಫಲಿತಾಂಶಕ್ಕೆ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದ್ದು, ಸ್ಪಷ್ಟ ಫಲಿತಾಂಶಕ್ಕೆ ಇನ್ನು ಮೂರು ದಿನ ಕಾಯಬೇಕಿದೆ.