ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಭಯಕ್ಕೆ ಬಿದ್ರಾ ಅನ್ನೋ ಅನುಮಾನವೊಂದು ಮೂಡಿದೆ. ಯಾಕಂದ್ರೆ ಐಟಿ ದಾಳಿ ಮಾಡ್ಲಿಲ್ಲ ಅಂದ್ರೆ `ರಾಜಕೀಯ’ ಕಷ್ಟ ಎಂದು `ಚೌಕಿದಾರ್’ ಜೋಡಿಗೆ ಮುನ್ಸೂಚನೆಯೊಂದು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಚುನಾವಣೆ ಹೊತ್ತಲ್ಲೇ ದೋಸ್ತಿಗಳಿಗೆ ಐಟಿ ದಾಳಿಯ ಶಾಕ್ ಕೊಟ್ರಾ ಅನ್ನೋ ಪ್ರಶ್ನೆ ಎದ್ದಿದೆ.
Advertisement
ಮುನ್ಸೂಚನೆ ಏನು..?
ಲೋಕಸಭಾ ಚುನಾವಣಾ ಸರ್ವೆಯೊಂದು ನಡೆದಿದೆ. ಇದರಿಂದ `ಚೌಕಿದಾರ್’ ಜೋಡಿ ಬೆಚ್ಚಿಬಿದ್ದಿದೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿಯಿಂದಾಗಿ ಹಳೆಯ ಸೀಟುಗಳನ್ನೂ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಟಾರ್ಗೆಟ್ 25 ರೀಚ್ ಆಗುವುದಿರಲಿ, 17 ಸ್ಥಾನಗಳಲ್ಲಿ ಮತ್ತೆ ಗೆಲ್ಲುವುದೇ ಕಷ್ಟವಾಗುತ್ತದೆ. ಇದರಿಂದ ಕಾಂಗ್ರೆಸ್-ಜೆಡಿಎಸ್ ಲೋಕಸಭಾ ಮೈತ್ರಿಯಿಂದ ಬಿಜೆಪಿಗೆ ಭಾರೀ ನಷ್ಟ ಎಂಬ ಮುನ್ಸೂಚನೆ ಸಿಕ್ಕಿರುವುದಾಗಿ ಮಾಹಿತಿ ಲಭಿಸಿದೆ. ಇದನ್ನೂ ಓದಿ: ‘ಲೋಕ ಸಮರ’ಕ್ಕೆ ಐಟಿ ಈಟಿ-ಐಟಿ ದಾಳಿ ನಡೆದಿದ್ದೇಲ್ಲಿ?
Advertisement
ಈ ಸರ್ವೆಯ ವರದಿ ಫೆಬ್ರವರಿ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಶಾ ಕೈ ಸೇರಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೋಸ್ತಿಗಳ ಶಕ್ತಿ ಕುಗ್ಗಿಸಲು `ಐಟಿ ಅಸ್ತ್ರ’ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಮೊದಲ ಹಂತದಲ್ಲಿ ಮತದಾನ ನಡೆಯೋ ಕಡೆಗಳಲ್ಲಿ ಗುರುವಾರದಿಂದ ಐಟಿ ಶೋಧ ನಡೆಯುತ್ತಿದೆ. ಸಿಎಂ ಕುಮಾರಸ್ವಾಮಿ, ರೇವಣ್ಣ, ಡಿಕೆಶಿಯನ್ನೇ ಗುರಿಯಾಗಿಟ್ಟುಕೊಂಡು ಹುಡುಕಾಟ ನಡೆಸಲಾಗಿದೆ. 2ನೇ ಹಂತದ ಮತದಾನ ನಡೆಯೋ ಶಿವಮೊಗ್ಗದಲ್ಲೂ ಶೋಧ ನಡೆಯಲಿದ್ದು, ಚುನಾವಣೆ ಮುಗಿಯೋದಕ್ಕೂ ಮೊದಲು ಮತ್ತೊಮ್ಮೆ ಐಟಿ ದಾಳಿ ನಡೆಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.