– ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ
ಬೆಂಗಳೂರು: ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮಹಾಘಟಬಂಧನ್, ಎಸ್‍ಪಿ-ಬಿಎಸ್‍ಪಿ ಮೈತ್ರಿ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಮಾತನಾಡುತ್ತಿರಬಹುದು. ಆದ್ರೆ ಸಮೀಕ್ಷೆಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾದಿ ಸುಲಭವಲ್ಲ. ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿದ್ದು, ಅದ್ರಲ್ಲಿ ಮೋದಿ ಪಾಲಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ ಎಂಬ ಸೂಚನೆ ಸಿಕ್ಕಿದೆ.
Advertisement
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಮೈತ್ರಿಕೂಟಕ್ಕೂ ಬಹುಮತ ಸಿಗದೇ ಇದ್ದರೂ, ಚುನಾವಣೋತ್ತರ ಮೈತ್ರಿಯಿಂದ ಎನ್‍ಡಿಎ ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಎಬಿಪಿ ಹಾಗೂ ಸಿ-ವೋಟರ್ ಸಮೀಕ್ಷೆ ತಿಳಿಸಿದೆ. ಚುನಾವಣಾ ಪೂರ್ವ ಮೈತ್ರಿಯಿಂದ ಎನ್‍ಡಿಎ 233 ಹಾಗೂ ಯುಪಿಎ 167 ಸ್ಥಾನಗಳನ್ನು ಪಡೆಯಲಿದೆ. ತೃತೀಯ ರಂಗ 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಸರಳ ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದೆ. 203 ಸ್ಥಾನಗಳನ್ನು ಜಯಿಸುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ಸದಸ್ಯರ ಬಲ ಬಹುತೇಕ ದುಪ್ಪಟ್ಟಾಗಲಿದ್ದು, 109 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜು ಮಾಡಿದೆ.
Advertisement
Advertisement
ಇನ್ನು ಕರ್ನಾಟಕದ ಪರಿಸ್ಥಿತಿ ಯಾರಿಗೆ ಎಷ್ಟು ಸಿಗಬಹುದು? ಇಷ್ಟಕ್ಕೂ ಚುನಾವಣಾ ಪೂರ್ವ ಸಮೀಕ್ಷೆಗಳು ಏನು ಹೇಳುತ್ತವೆ ಅನ್ನೋದನ್ನು ನೋಡೋದಾದ್ರೆ.. ಲೋಕಸಭಾ ಒಟ್ಟು ಸ್ಥಾನ – 543, ಎನ್‍ಡಿಎ – 233, ಯುಪಿಎ-167, ಇತರರು 145 (ಯಾರಿಗೂ ಬಹುಮತ ಇಲ್ಲ- ಸಿಂಪಲ್ ಮೆಜಾರಿಟಿಗೆ ಬೇಕು 273)
Advertisement
ಕರ್ನಾಟಕ – ಒಟ್ಟು ಸ್ಥಾನ – 28, ಬಿಜೆಪಿ-14, ಕಾಂಗ್ರೆಸ್-11, ಜೆಡಿಎಸ್- 03
ಉತ್ತರ ಪ್ರದೇಶ – ಒಟ್ಟು ಸ್ಥಾನ – 80, ಎಸ್‍ಪಿ-ಬಿಎಸ್‍ಪಿ 51, ಬಿಜೆಪಿ 25, ಕಾಂಗ್ರೆಸ್ 04
ಆಂಧ್ರ ಪ್ರದೇಶ – ಒಟ್ಟು ಸ್ಥಾನ 25, ವೈಎಸ್‍ಆರ್‍ಸಿಪಿ -19, ಟಿಡಿಪಿ-06
ದೆಹಲಿ – ಒಟ್ಟು ಸ್ಥಾನ 07- ಬಿಜೆಪಿ-07, ಕಾಂಗ್ರೆಸ್ – 00
ಪಶ್ಚಿಮ ಬಂಗಾಳ – ಒಟ್ಟು ಸ್ಥಾನ 42, ಟಿಎಂಸಿ-34, ಬಿಜೆಪಿ 07, ಕಾಂಗ್ರೆಸ್-01
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ ಅನ್ನೋದು ಇಂಡಿಯಾ ಟುಡೇ-ಕಾರ್ವಿ ನಡೆಸಿದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಬಯಲಾಗಿದೆ. ಇದರ ಪ್ರಕಾರ ಯಾವ ಮೈತ್ರಿ ಕೂಟಕ್ಕೆ ಎಷ್ಟೆಷ್ಟು ಸ್ಥಾನ ಸಿಕ್ಕಿದೆ ಅನ್ನೋದನ್ನು ನೋಡೋದಾದ್ರೆ.. ಲೋಕಸಭೆ ಒಟ್ಟು ಸ್ಥಾನ -543, ಎನ್‍ಡಿಎ – 237 (-86), ಯುಪಿಎ-166 (+60), ಇತರರು 140 (-13)
ಉತ್ತರ ಪ್ರದೇಶ – ಒಟ್ಟು ಸ್ಥಾನ-80, ಎಸ್‍ಪಿ-ಬಿಎಸ್‍ಪಿ -58, ಬಿಜೆಪಿ – 18, ಕಾಂಗ್ರೆಸ್ – 04
ಒಟ್ಟಿನಲ್ಲಿ ಚುನಾವಣೆಗೆ ಇನ್ನೂ ನಾಲ್ಕು ತಿಂಗಳಿನಷ್ಟು ಕಾಲಾವಕಾಶವಿದೆ. ಚುನಾವಣಾ ಪೂರ್ವ ಸಮೀಕ್ಷೆಯಿಂದ ರಾಜಕೀಯ ಮುಖಂಡರು ಆಕ್ಟಿವ್ ಆಗಿದ್ದು ಎಲ್ಲರ ಭವಿಷ್ಯ ಮತದಾರರಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv