ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕಾರಣಿಗಳಿಗೆ ಢವಢವ ಆರಂಭವಾಗಿದೆ. ಚುನಾವಣಾ ಆಯೋಗವು ರಾಜಕಾರಣಿಗಳ ಮೇಲೆ ಹೊಸ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆ. ರಾಜಕಾರಣಿಗಳು ಲೆಕ್ಕ ಕೊಡ್ಲೇ ಬೇಕು, ಇಲ್ಲಾಂದ್ರೆ ಎಲೆಕ್ಷನ್‍ಗೆ ನಿಲ್ಲೋ ಹಾಗೇ ಇಲ್ಲ ಎಂಬ ಹೊಸ ನೀತಿಯನ್ನು ಚುನಾವನಾ ಆಯೋಗ ಮುಂದಿಟ್ಟಿದೆ.
ಏನದು ರೂಲ್ಸ್..?
ಚುನಾವಣೆಗೆ ನಿಲ್ಲುವ ರಾಜಕಾರಣಿಗಳು ತಮ್ಮ ಸಂಪತ್ತಿನ ಲೆಕ್ಕ ಕೊಡುವುದು ಕಡ್ಡಾಯವಾಗಿದೆ. ಕೇವಲ ಭಾರತದಲ್ಲಿರುವ ಆಸ್ತಿಪಾಸ್ತಿಯಷ್ಟೇ ಅಲ್ಲ ಈ ಬಾರಿ ವಿದೇಶಿ ಸಂಪತ್ತಿನ ಲೆಕ್ಕನೂ ಕೊಡಬೇಕು. 5 ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಮುಂದೆ ಘೋಷಿಸಿಕೊಂಡಿರುವ ಆಸ್ತಿಪಾಸ್ತಿ ಲೆಕ್ಕನೂ ಕೊಡಬೇಕು. ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಪತಿ ಅಥವಾ ಪತ್ನಿ, ಮಕ್ಕಳು, ಕುಟುಂಬಸ್ಥರ ಹೆಸರಲ್ಲಿರುವ ಆಸ್ತಿಯ ಲೆಕ್ಕವನ್ನೂ ನೀಡಬೇಕು.
Advertisement
Advertisement
ವಿದೇಶಿ ಸಂಪತ್ತು, 5 ವರ್ಷಗಳ ಹಿಂದಿನ ಐಟಿ ಲೆಕ್ಕ ಕೊಡದೆ ಹೋದರೆ ನಾಮಪತ್ರ ತಿರಸ್ಕೃತವಾಗುತ್ತದೆ. ಈ ಮಾಹಿತಿಗಳನ್ನ ಚುನಾವಣಾಧಿಕಾರಿಗಳು ನೋಟಿಸ್ ಬೋರ್ಡ್ ನಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಅಭ್ಯರ್ಥಿಗಳ ಪಕ್ಷವೇ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಕೂಡ ಕಡ್ಡಾಯವಾಗಿದೆ.
Advertisement
ಅಭ್ಯರ್ಥಿಗಳು ಬೇಕಾಬಿಟ್ಟಿ, ಪ್ರಚಾರ ಮಾಡಂಗಿಲ್ಲ. ಖರ್ಚು ಮಾಡುವಂತಿಲ್ಲ. ಇದರ ಬಗ್ಗೆಯೂ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಫಾರ್ಮ್ 26 ಸರಿಯಾಗಿ ಭರ್ತಿಯಾಗದಿದ್ದಲ್ಲಿ ನಾಮಪತ್ರ ತಿರಸ್ಕೃತವಾಗಲಿದೆ. ನಿಖರ ಮಾಹಿತಿ ಇಲ್ಲದಿದ್ದಲ್ಲಿ ಕೂಡ ನಾಮಪತ್ರ ತಿರಸ್ಕೃತವಾಗುತ್ತದೆ. ಅಭ್ಯರ್ಥಿಗಳು ಪಾನ್‍ಕಾರ್ಡ್ ಹೊಂದಿರಲೇಬೇಕು. ಸ್ಥಳೀಯ ಪತ್ರಿಕೆಗಳಲ್ಲಿ ಅಕ್ರಮ ಮಾಡೋ ಅಭ್ಯರ್ಥಿಗಳ ಭಾವಚಿತ್ರವರಬಾರದು. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾರು ಬೇಕಾದರೂ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಕೊಡಬಹುದು.
Advertisement
ಮೊಬೈಲ್ ಆಪ್ ಮೂಲಕ ದೂರು ನೀಡಲು ಅವಕಾಶವಿದೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ 100 ನಿಮಿಷದ ಒಳಗೆ ಕ್ರಮ ಕೈಗೊಳ್ಳಲಾಗುವುದು. ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಪ್ರಚಾರಕ್ಕೆ ಬ್ರೇಕ್ ಹಾಕಲಾಗಿದೆ. ಮಾಧ್ಯಮಗಳಲ್ಲಿ ಪ್ರಚಾರ ಮಾಡಿದರೆ ಅದರ ಲೆಕ್ಕವನ್ನು ಕೂಡ ನೀಡಬೇಕು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv