ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದು ಡೌಟ್ ಎನ್ನಲಾಗುತ್ತಿದೆ. ಯಾಕಂದ್ರೆ 2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿಗೆ ಈ ಬಾರಿ 220 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ.
2014ಕ್ಕೆ ಹೋಲಿಸಿದ್ರೆ 62 ಸ್ಥಾನಗಳು ಖೋತಾವಾಗಲಿದ್ದು ಬಹುಮತಕ್ಕೆ 52 ಸ್ಥಾನಗಳ ಕೊರತೆ ಉಂಟಾಗುತ್ತದೆ. ಸದ್ಯ ಲೋಕಸಭೆಯಲ್ಲಿ 305 ಸ್ಥಾನ ಹೊಂದಿರುವ ಎನ್‍ಡಿಎಗೆ 8 ಸೀಟುಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ.
Advertisement
Advertisement
300ರ ಗಡಿ ದಾಟಲು ಮೋದಿ ಮೂರು ದೈತ್ಯ ಪ್ರಾದೇಶಿಕ ಪಕ್ಷಗಳು ಕೈ ಹಿಡಿದರೆ ಬಲಿಷ್ಠ ಸರ್ಕಾರ ರಚನೆಗೆ ಲೆಕ್ಕಾಚಾರ ನಡೆದಿದೆ. ಹೀಗಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್, ಜಗನ್, ತೆಲಂಗಾಣ ಸಿಎಂ ಕೆಸಿಆರ್ ನತ್ತ ಮೋದಿ ಚಿತ್ತ ನೆಟ್ಟಿದೆ. ಬಿಜೆಡಿ, ಟಿಆರ್ ಎಸ್, ವೈಎಸ್‍ಆರ್ ಕಾಂಗ್ರೆಸ್ ಬರೋಬ್ಬರಿ 36 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿದ್ದು, ಆಗ ಎನ್‍ಡಿಎ ಬಲಾಬಲ 264+36 = 300 ಸೀಟುಗಳ ಗಡಿದಾಟುವ ನಿರೀಕ್ಷೆ ಇದೆ ಎಂಬುದಾಗಿ ಮೂಲಗಳು ತಿಳಿಸಿವೆ.
Advertisement
Advertisement
ನಡೆಯುತ್ತಾ ಮೂರರ ಮ್ಯಾಜಿಕ್..?
ಆಂಧ್ರಪ್ರದೇಶ – ಯುವಜನ ಶ್ರಮಿಕ ರಿತು ಕಾಂಗ್ರೆಸ್ (ವೈಎಸ್‍ಆರ್) – 11( ಗೆಲ್ಲುವ ಸ್ಥಾನ)
ತೆಲಂಗಾಣ – ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) – 16 (ಗೆಲ್ಲುವ ಸ್ಥಾನ)
ಓಡಿಶಾ – ಬಿಜು ಜನತಾ ದಳ (ಬಿಜೆಡಿ) – 09(ಗೆಲ್ಲುವ ಸ್ಥಾನ)
ವೈಎಸ್‍ಆರ್‍ಪಿ+ಟಿಆರ್ ಎಸ್+ಬಿಜೆಡಿ – 36
ಎನ್‍ಡಿಎ ಗೆಲ್ಲಬಹುದಾದ ಸ್ಥಾನಗಳು- 264
ಒಟ್ಟು – 300
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv