ಮುರುಘಾ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Advertisements

ಬೆಂಗಳೂರು: ಮುರಘಾ ಮಠದ ಶ್ರೀಗಳಿಗೆ ಚಿಕಿತ್ಸೆ ನಿಡಿದ್ದ ವೈದ್ಯಾಧಿಕಾರಿ ಸೇರಿ ಮೂವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

Advertisements

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಂಗನಾಥ್, ಆಸ್ಪತ್ರೆಯ ಸರ್ಜನ್ ಡಾ.ಎಸ್.ಕೆ ಬಸವರಾಜ್, ಕಾರಾಗೃಹ ಅಧಿಕಾರಿ ಎಂ.ಎಂ ಮರಕಟ್ಟಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ಮೂವರು ಜಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಕರ್ತವ್ಯಲೋಪ ಎಸಗಿದ್ದಾರೆ, ಪ್ರಭಾವಿ ಆರೋಪಿಯ ರಕ್ಷಣೆ ಮಾಡುವ ಹುನ್ನಾರವನ್ನೂ ನಡೆಸಿದ್ದಾರೆ. ಹಾಗಾಗಿ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅರ್ಶ್‌ದೀಪ್‌ ಟೀಕಿಸುವ ಬದಲು ಧೈರ್ಯ ತುಂಬಿ – ಮುಂದಿನ ಭಾನುವಾರಕ್ಕೆ ಸಜ್ಜಾಗಿ: ಮಾಜಿ ಆಟಗಾರರ ಸಲಹೆ

Advertisements

ದೂರಿನಲ್ಲಿ ಏನಿದೆ?
ಚಿತ್ರದುರ್ಗ ಜಿಲ್ಲೆಯ ಮುರಘಾ ಮಠದಲ್ಲಿನ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೊದಲನೇ ಆರೋಪಿ ನ್ಯಾಯಾಂಗ ಬಂಧನಲ್ಲಿದ್ದರು. ಈ ವೇಳೆ ತುಂಬಾ ಎದೆ ನೋವಿದೆ ಎಂದ ತಕ್ಷಣ ನ್ಯಾಯಾಲಯದ ಗಮನಕ್ಕೂ ತರದೆ ಚಿತ್ರದುರ್ಗ ಜಿಲ್ಲಾಸತ್ರೆಗೆ ಮುಂಜಾನೆ ದಾಖಲಿಸಿ ಚಿಕಿತ್ಸೆ ನಿಡಲು ಮುಂದಾಗಿದ್ದರು. ಚಿಕಿತ್ಸೆ ನೀಡುವ ಹಂತದಲ್ಲಿ ಅಲ್ಲಿನ ವೈದ್ಯಾಧಿಕಾರಿ ಇವರಿಗೆ ತೀವ್ರ ತರವಾದ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಸುಳ್ಳು ಹೇಳಿ, ದಾಖಲೆಗಳನ್ನೂ ಸೃಷ್ಟಿಸಿ ದಾವಣಗೆರೆಯ ಖಾಸಗಿ ಹೃದಯ ತಜ್ಞರನ್ನು ಕರೆಸಿ ಆರೋಪಿಗೆ ತೀವ್ರತರವಾದ ಎದೆ ನೋವಿದೆ, ಹೃದಯಕ್ಕೆ ಘಾಸಿಯಾಗಿದೆ. ಈ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ವೈದ್ಯಕೀಯ ಸೌಲಭ್ಯವಿಲ್ಲ, ಇವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ವಿಶೇಷ ಚಿಕಿತ್ಸೆ ನೀಡಬೇಕೆಂದು ಹೇಳಿದ್ದಾರೆ. ತಕ್ಷಣ ಆರೋಪಿಯನ್ನು ಐಸಿಯುನಲ್ಲಿ ದಾಖಲಿಸಿ, ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹುನ್ನಾರವನ್ನೂ ನಡೆಸಿದ್ದರು.

ಪ್ರಭಾವಿ ಸ್ಥಾನದಲ್ಲಿರುವ ಆರೋಪಿಯ ರಕ್ಷಣೆಗೆ ನಿಂತ ಈ ಸರ್ಕಾರದ ಅಧಿಕಾರಿಗಳಾದ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ.ಎಂ ಮರಕಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಂಗನಾಥ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಎಸ್.ಕೆ ಬಸವರಾಜ್ ಕರ್ತವ್ಯ ಲೋಪವೆಸಗಿ ಆರೋಪಿಯ ಜೊತೆ ಶಾಮೀಲಾಗಿ ಬೃಹತ್ ನಾಟಕ ಆಡಿರುತ್ತಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಯಾರನ್ನೂ ವಿಚಾರಣೆ ಮಾಡ್ಬೇಡಿ: ಮಡಿವಾಳೇಶ್ವರ ಸ್ವಾಮೀಜಿ ಡೆತ್‍ನೋಟ್

Advertisements

ಮುರುಘಾ ಶ್ರೀ ಜೈಲಿಗೆ:
ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶ್ರೀ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭಾನುವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಶ್ರೀಗಳನ್ನು ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾ ಕೋಮಲಾ ವಿಚಾರಣೆ ಮುಗಿತಾ ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳದ ಕಾರಣ ನ್ಯಾಯಾಧೀಶರು ಸೆ.14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.

Live Tv

Advertisements
Exit mobile version