ಬೆಂಗಳೂರು: ಬುಧವಾರದಂದು ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದ ಆರೋಪಿ ತೇಜ್ ರಾಜ್ ಗೆ ಬೌರಿಂಗ್ ಆಸ್ಪತ್ರೆ ವೈದ್ಯರು ಫಿಟ್ ಆಂಡ್ ಫೈನ್ ರಿಪೋರ್ಟ್ ನೀಡಿದ್ದಾರೆ.
ವಿಚಾರಣೆ ನಡೆಸಬಹುದು ಅಂತ ವೈದ್ಯರು ವರದಿ ನೀಡಿದ್ದು, ಇಂದು ಮಧ್ಯಾಹ್ನದ ವೇಳೆಗೆ ಆರೋಪಿ ತೇಜ್ ರಾಜ್ ಶರ್ಮನನ್ನ ಪೊಲೀಸರು ಕೋರ್ಟ್ ಗೆ ಕರೆದೊಯ್ಯಲಿದ್ದಾರೆ. ಇದನ್ನೂ ಓದಿ: ದೂರುಗಳ ಮೇಲೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ- ಪೊಲೀಸ್ ಮುಂದೆ ತಪ್ಪೊಪ್ಪಿಕೊಂಡ ತೇಜರಾಜ್
Advertisement
Advertisement
8ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಆರೋಪಿ ತೇಜರಾಜ್ ಶರ್ಮನನ್ನ ಹಾಜರುಪಡಿಸಲಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದ್ದಾರೆ. ಸದ್ಯ ಆರೋಪಿ ಶರ್ಮಾ ಅಶೋಕನಗರ ಪೊಲೀಸರ ವಶದಲ್ಲಿದ್ದಾನೆ. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಕ್ಕೆ ತೇಜರಾಜ್‍ನನ್ನೇ ಪ್ರಕರಣದಲ್ಲಿ ಸಿಲುಕಿಸುವ ಸಂಚು ನಡೆದಿತ್ತು!
Advertisement
ಚಾಕು ಇರಿತಕ್ಕೆ ಒಳಗಾಗಿದ್ದ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರಿಗೆ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಲೋಕಾಯುಕ್ತರಿಗೆ ಎಲ್ಲೆಲ್ಲಿ ಇರಿಯಲಾಗಿದೆ? ಈಗ ಹೇಗಿದ್ದಾರೆ: ಮಲ್ಯ ಆಸ್ಪತ್ರೆ ವೈದ್ಯರು ಹೇಳ್ತಾರೆ ಓದಿ
Advertisement