ಮೈಸೂರು/ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ ಅವರೇ ಎ-1 ಆರೋಪಿಯಾಗಿದ್ದು, ತನಿಖೆಯ ಟೆನ್ಷನ್ ಶುರುವಾಗಿದೆ. ಶನಿವಾರ – ಭಾನುವಾರ ಲೋಕಾಯುಕ್ತ ಕಚೇರಿಗೆ ರಜೆ ಇರೋದ್ರಿಂದ ಸೋಮವಾರದಿಂದ ಅಧಿಕೃತ ತನಿಖೆ ಶುರುವಾಗಲಿದೆ. ಎಫ್‌ಐಆರ್ ಆದ ಬೆನ್ನಲ್ಲೇ ಲೋಕಾಯುಕ್ತ ಎಸ್‌ಪಿ (Lokayukta SP) ತನಿಖೆಗೆ 4 ತಂಡಗಳನ್ನು ರಚಿಸಿದ್ದಾರೆ.
3 ತಿಂಗಳೊಳಗೆ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಬೇಕಿರೋದ್ರಿಂದ ತನಿಖೆ ಸ್ವಲ್ಪ ಚುರುಕಾಗಿಯೇ ನಡೆಯುತ್ತೆ ಎನ್ನಲಾಗ್ತಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ (Siddaramaiah) ಕಾನೂನು ಹೋರಾಟ ಆರಂಭಿಸಿದ್ದು ಮೈಸೂರಿನ ನಿವಾಸದಲ್ಲಿ ವಕೀಲರು, ಕಾನೂನು ಸಲಹೆಗಾರ ಪೊನ್ನಣ್ಣ ಹಾಗೇ ಸಚಿವ ಬೈರತಿ ಸುರೇಶ್ ಜೊತೆ ಚರ್ಚಿಸಿದ್ರು. ನನ್ನಿಂದ ಸಿಎಂಗೆ ಸಂಕಷ್ಟ ಬಂತು ಅನ್ನೋದ್ರಲ್ಲಿ ಅರ್ಥ ಇಲ್ಲ ಅಂತ ಬೈರತಿ ಸುರೇಶ್ ಹೇಳಿದ್ರು. ಇದನ್ನೂ ಓದಿ: ಪೆಟ್ರೋಲ್ – ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಲ್ಲ: ಹರ್ದೀಪ್ ಸಿಂಗ್ ಪುರಿ
ದಾನದ ರೂಪದಲ್ಲಿ ಸಿಎಂ ಪತ್ನಿಗೆ 3.11 ಎಕರೆ ನೀಡಿದ್ದ ಸಿಎಂ ಬಾಮೈದ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ಹೆಸರಿದ್ದರೆ ನಾನೇನು ಮಾಡಲಿ, ಎಲ್ಲವನ್ನೂ ದೊಡ್ಡವರು ಮಾತಾಡ್ತಾರೆ. ನಾನೇನು ಮಾತನಾಡಲ್ಲ ಅಂತ ಮಲ್ಲಿಕಾರ್ಜುನಸ್ವಾಮಿ ಜಾರಿಕೊಂಡ್ರು. ಅಲ್ಲದೇ, ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತಕ್ಕೆ ನೀಡಿರುವ ವಿಳಾಸದಲ್ಲಿ ವಾಸವೇ ಮಾಡ್ತಿಲ್ಲ ಅನ್ನೋದು ತಿಳಿದುಬಂದಿದೆ. ಸಚಿವ ಮಹದೇವಪ್ಪ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಪಟ್ಟಭಧ್ರ ಹಿತಾಸಕ್ತಿಗಳು ಹೊರಟಿವೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹೆಚ್ಚು ರೈತರ ಸಾವು: ಪ್ರಧಾನಿ ಮೋದಿ ಆರೋಪ
ದೂರುದಾರ ಸ್ನೇಹಮಯಿ ಕೃಷ್ಣ ಮಾತಾಡಿ, ಸಿದ್ದರಾಮಯ್ಯ ಪತ್ನಿ ಹೆಸರಲ್ಲಿ ಎಫ್‌ಐಆರ್ ಮಾಡಿಸಿದ್ದು, ನನಗೆ ವೈಯಕ್ತಿಕವಾಗಿ ಬೇಸರವಿದೆ ಎಂದಿದ್ದಾರೆ, ಜೊತೆಗೆ ಲೋಕಾಯುಕ್ತ ತನಿಖೆ ಬೇಡ. ಸಿಬಿಐ ತನಿಖೆಯೇ ಆಗಲಿ ಅಂತ ಆಗ್ರಹಿಸಿದ್ದಾರೆ. ಈ ಮಧ್ಯೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ `ಪೊಲಿಟಿಕಲ್ ಆರ್ಡರ್’ ಅಂತ ಟೀಕಿಸಿದ್ದ ಸಚಿವ ಜಮೀರ್ ವಿರುದ್ಧ ಎಜಿ ಶಶಿಕಿರಣ್ ಶೆಟ್ಟಿಗೆ ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ. ಇದನ್ನೂ ಓದಿ: ಯಾದಗಿರಿ | ವಿಷಕಾರಿ ನೀರು ಸೇವಿಸುತ್ತಿರುವ ತಾಂಡಾ ಗ್ರಾಮಸ್ಥರು – ಇಲ್ಲಿನ ಜನಕ್ಕಿಲ್ಲ ಶುದ್ಧ ಕುಡಿಯುವ ನೀರು