ಮೈಸೂರು: ಲಂಚ ಸ್ವೀಕರಿಸುವಾಗಲೇ ಕಾವೇರಿ ನೀರಾವರಿ ನಿಗಮದ (Cauvery Corporation) ಕಾರ್ಯಪಾಲಕ ಇಂಜಿನಿಯರ್ ಕಾವೇರಿ ರಂಗನಾಥ್ ಹಾಗೂ ಅಕೌಂಟ್ ಸೂಪರಿಡೆಂಟ್ ಉಮಾಮಹೇಶ್ ಲೋಕಾಯುಕ್ತ (Lokayukta Raids) ಬಲೆಗೆ ಬಿದ್ದಿದ್ದಾರೆ.
ಟೆಂಡರ್ ಹಣ ಬಿಡುಗಡೆಗೆ ಚಾಮರಾಜನಗರ ನಿವಾಸಿ ಅಬ್ದುಲ್ ಅಜೀಜ್ ಬಳಿ ಇಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2022ರಲ್ಲಿ ನಾಲೆ ರಿಪೇರಿಗೆ ಟೆಂಡರ್ ಕರೆಯಲಾಗಿತ್ತು. 23.10 ಲಕ್ಷ ರೂ.ಗೆ ಕಾಮಗಾರಿ ಹಣ ಬಿಡುಗಡೆ ಮಾಡಲು ಮೊದಲು 6% ಲಂಚ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ: ಬೆಲೆ ಏರಿಕೆಯ ಪಾಪ ನಮ್ಮೇಲೇರಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ಮುಖಕ್ಕೆ ಮೋದಿ ಮಸಿ ಬಳಿದಿದ್ದಾರೆ: ಸಿಎಂ
- Advertisement3
ಸ್ವಲ್ಪ ದಿನಗಳ ಬಳಿಕ 1 ಲಕ್ಷದ 45 ಸಾವಿರ ರೂ.ಗೆ ಡಿಮ್ಯಾಂಡ್ ಮಾಡಲಾಗಿತ್ತು. ಈ ಮೂಲಕ ಕಾಮಗಾರಿ ಹಣ ಪಡೆಯಲು ಬಂದಾಗ 10% ಲಂಚ ಏರಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ. ಇಂದು (ಏ.7) ಇಬ್ಬರೂ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಆರೇ ತಿಂಗಳಲ್ಲಿ ತಂದುಕೊಡ್ತೀನಿ – 2.45 ಲಕ್ಷ ರೂ. ಕದ್ದು ಪತ್ರ ಬರೆದಿಟ್ಟು ಹೋದ ಕಳ್ಳ!