ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರು (Mysuru) ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಂಜನಗೂಡಿನ ಸರ್ಕಾರಿ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮನೆ ಮೇಲೆ ದಾಳಿ (Lokayukta Raid) ನಡೆದಿದೆ. ಇದರೊಂದಿಗೆ ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ದಾಳಿ ನಡೆದಿದೆ.
ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ (Government College Lecturer) ಮಹದೇವಸ್ವಾಮಿ ವಿರುದ್ಧ ಕುಟುಂಬದ ಹೆಸರಿನಲ್ಲಿ MS Group ಕಂಪನಿ ನಡೆಸುತ್ತಿದ್ದು, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಆಸ್ತಿ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: Lokayukta Raid: ತಿಮ್ಮರಾಜಪ್ಪ ಒಡೆತನದ ಬಂಗಲೆಗಳನ್ನು ನೋಡಿ ಅಧಿಕಾರಿಗಳೇ ದಂಗಾದ್ರು!
Advertisement
Advertisement
ಲೋಕಾಯುಕ್ತ ADGP ಪ್ರಶಾಂತ್ ಕುಮಾರ್ ಹಾಗೂ IGP ಸುಬ್ರಮಣ್ಣೀಶ್ವರ ರಾವ್, ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಡಿಎಸ್‌ಪಿ ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಿಂದ ವಿವಿಧ ಕಡೆಗಳಲ್ಲಿ ದಾಳಿ ನಡೆದಿದೆ.
Advertisement
ಹೆಸರಿಗೆ ಮಾತ್ರ ಸರ್ಕಾರಿ ಕಾಲೇಜು ಉಪನ್ಯಾಸಕ:
ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮಹದೇವಸ್ವಾಮಿ ಹೆಸರಿಗಷ್ಟೆ ಉಪನ್ಯಾಸಕ, ಮಾಡೊದೆಲ್ಲ ಬೇರೆ ವ್ಯವಹಾರ ಎಂಬುದು ಸ್ಪಷ್ಟವಾಗಿದೆ. ಲೋಕಾಯುಕ್ತ ಅಧಿಕಾರಿಗಳ ತಂಡ ಮಹದೇವಸ್ವಾಮಿಗೆ ಸೇರಿದ ಮನೆ, ಕಚೇರಿ, ಶಾಲೆ, ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್ – ಮನೆಯ 2ನೇ ಯಜಮಾನರ ಖಾತೆಗೆ ಅನ್ನಭಾಗ್ಯ ಹಣ
Advertisement
ಮೈಸೂರಿನ ಜೆ.ಪಿ ನಗರಲ್ಲಿ ವಾಸವಿದ್ದ ಮಹದೇವಸ್ವಾಮಿಗೆ ಸೇರಿದ ಮೈಸೂರಿನ ಗುರುಕುಲ ವಿದ್ಯಾಸಂಸ್ಥೆ, ಸ್ಟೀಲ್ ಅಂಗಡಿಗಳು ಹಾಗೂ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿಯಾಗಿದೆ. ಮೈಸೂರಿನಲ್ಲಿ ಸ್ಟೀಲ್ ಹಾಗೂ ಬಟ್ಟೆ ಅಂಗಡಿ, ನಂಜನಗೂಡು ಸ್ಟೀಲ್ ಅಂಗಡಿ, ಕೆ.ಆರ್.ನಗರದ ಸ್ಟೀಲ್ ಅಂಗಡಿ ಮೇಲೆ ದಾಳಿಯಾಗಿದೆ. ಅಲ್ಲದೇ ಈತ ತನ್ನ ಕಾರುಗಳನ್ನ ನಿಲ್ಲಿಸೋದಕ್ಕೆ 100*100 ಜಾಗ ಮಾಡಿಕೊಂಡಿದ್ದ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ