ಧಾರವಾಡ: ಲೋಕಾಯುಕ್ತ ಪೊಲೀಸರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ಎಇಇ (AEE) ಗೋವಿಂದಪ್ಪ ಭಜಂತ್ರಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಧಾರವಾಡದ (Dharawada) ಗಾಂಧಿನಗರದಲ್ಲಿರುವ ಗೋವಿಂದಪ್ಪ ನಿವಾಸದ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಗೋವಿಂದಪ್ಪ ಅವರಿಗೆ ಸೇರಿದ ಧಾರವಾಡ ಗಾಂಧಿನಗರದಲ್ಲಿರುವ ಮನೆ, ತೇಜಸ್ವಿನಗರದಲ್ಲಿರುವ ಅಳಿಯನ ಮನೆ, ಸವದತ್ತಿ ತಾಲೂಕಿನ ಹೂಲಿ, ಉಗರಗೋಳ ಫಾರ್ಮ್‌ಹೌಸ್, ನರಗುಂದದಲ್ಲಿರುವ ಅವರ ಸಹೋದರನ ಮನೆ ಮತ್ತು ಲಕಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಆರೋಪಿ ಸಾವು ಕೇಸ್ – ಸಬ್ ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೇಬಲ್ ಅಮಾನತು
ಗಾಂಧಿನಗರದಲ್ಲಿರುವ (Gandhinagara) ಗೋವಿಂದಪ್ಪ ಅವರ ನಿವಾಸದ ಮುಂದೆ ಇದ್ದ ಅವರ ಕಾರುಗಳಲ್ಲಿ ಕೂಡ ಲೋಕಾಯುಕ್ತ ಪೊಲೀಸರು ಇಂಚಿಂಚು ತಪಾಸಣೆ ನಡೆಸಿದ್ದಾರೆ. ಅಲ್ಲದೇ ಅವರ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿದ್ದಾರೆ. ಗೋವಿಂದಪ್ಪಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ಲೋಕಾಯುಕ್ತರು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭೆಗೆ ನಾಳೆ ಮೊದಲ ಹಂತದ ಚುನಾವಣೆ – 15 ಜಿಲ್ಲೆಗಳ 42 ಸ್ಥಾನಗಳಿಗೆ ಮತದಾನ