– ಹೆರಿಗೆ ವಾರ್ಡ್ನಲ್ಲಿ ನರ್ಸ್‌ಗಳಿಗೆ ಹಣ ಕೊಡ್ಬೇಕು: ಮಹಿಳೆಯಿಂದ ದೂರು
– ಆಸ್ಪತ್ರೆ ನಿರ್ವಹಣೆ ಸರಿಯಾಗಿಲ್ಲ ಎಂದ ಲೋಕಾಯುಕ್ತ ಅಧಿಕಾರಿ
ಬೆಂಗಳೂರು: ನಗರದ ಕೆ.ಸಿ.ಜನರಲ್ ಆಸ್ಪತ್ರೆ (K.C.General Hospital) ಮೇಲೆ ಲೋಕಾಯುಕ್ತ (Lokayukta Raid) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಸಮಸ್ಯೆಗಳ ಸರಮಾಲೆಯೇ ಅನಾವರಣಗೊಂಡಿದೆ.
Advertisement
ಮುಖ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತರಾದ ನ್ಯಾ.ಪಣೀಂದ್ರ, ನ್ಯಾ.ಬಿ.ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆ ಬಗ್ಗೆ ಸಾರ್ವಜನಿಕರ ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸ್ವಚ್ಛತೆ, ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯ, ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿದರು. ಖುದ್ದು ರೋಗಿಗಳ ಬಳಿಯೇ ಸಮಸ್ಯೆ ಆಲಿಸಿದರು. ಮೂರು ತಂಡಗಳಾಗಿ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದರು. ಇದನ್ನೂ ಓದಿ: ಮುಡಾದ 50:50 ಸೈಟು ಹಂಚಿಕೆಯಲ್ಲಿ ಹಗರಣ ಆಗಿದೆ: ಯತೀಂದ್ರ ಸಿದ್ದರಾಮಯ್ಯ
Advertisement
Advertisement
ಹೆರಿಗೆ ವಾರ್ಡ್‌ನಲ್ಲಿ ಪ್ರತಿಯೊಬ್ಬರು ಹಣ ಕೇಳ್ತಾರೆ. ನಾವು ಹೇಗೆ ಹಣ ನೀಡೋದು. ಕಳೆದ ತಿಂಗಳು ಹೆರಿಗೆ ವಾರ್ಡ್ನಲ್ಲಿ ಸಂಬಂಧಿಕರನ್ನ ಸೇರಿದ್ದ ಮಹಿಳೆಯು ಲೋಕಾಯುಕ್ತ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಎಷ್ಟು ಹಣ ನೀಡಿದ್ರಿ, ಅಂತಾ ಕೇಳಿದ್ರೇ, ‘ಅದನ್ನ ಹೇಳಲ್ಲ. ಪ್ರತಿಯೊಬ್ಬರು ಹಣ ಪಡೆದಿದ್ದಾರೆ’ ಎಂದು ಮಹಿಳೆ ದೂರಿದರು.
Advertisement
ಆಸ್ಪತ್ರೆಯಲ್ಲಿ ಹೆರಿಗೆ ಮಾಡಬೇಕು ಅಂದ್ರೆ ದುಡ್ಡು ಕೊಡಬೇಕು. ಮಿನಿಮಮ್ 500 ರೂಪಾಯಿ ಕೊಟ್ರೆ ಮಾತ್ರ ಚಿಕಿತ್ಸೆ. ದುಡ್ಡು ಕೊಡಲಿಲ್ಲ ಅಂದ್ರೆ ತಾಯಿ ಕಾರ್ಡ್ ಕಿತ್ತುಕೊಂಡು ಇಟ್ಟುಕೊಳ್ಳುತ್ತಾರೆ. ನರ್ಸ್ ಮತ್ತು ವಾರ್ಡ್‌ಗಳಿಂದ ರೋಗಿಗಳಿಗೆ ಕಿರುಕುಳ ಇದೆ. ದುಡ್ಡು ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆಂದು ರೋಗಿ ಮಂಜುಳಾ ಎಂಬವರು ದೂರಿದ್ದಾರೆ. ದುಡ್ಡು ಪಡೆಯೋಕೆ ಅಂತನೇ ಒಂದು ರೂಂ ಇಟ್ಟಿದ್ದಾರೆ. ಆ ರೂಂಗೆ ಹೋಗಿ ದುಡ್ಡು ಕೊಟ್ಟು ಬರಬೇಕು. ದುಡ್ಡು ಕೊಡದೇ ಇದ್ರೆ ಕಿರುಕುಳ ಕೊಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 31 ದಿನಗಳಲ್ಲಿ 3 ಕೋಟಿ 92 ಲಕ್ಷ ಕಾಣಿಕೆ ಸಂಗ್ರಹ
ಆಸ್ಪತ್ರೆ ಪರಿಶೀಲನೆ ಬಳಿಕ ನ್ಯಾ. ಬಿ.ಎಸ್.ಪಾಟೀಲ್ ಮಾತನಾಡಿ, ‘ಡಿ’ ಗ್ರೂಪ್ ನೌಕರರು, ನರ್ಸ್ ದುಡ್ಡು ಕೇಳ್ತಾರೆ ಅಂತಾ ರೋಗಿಗಳು ಹೇಳ್ತಿದ್ದಾರೆ. ನಮಗೆ ಸುಮಾರು ಜನ ಬಂದು ಹೇಳಿದ್ರು. ಆದರೆ, ಇಲ್ಲಿ ಬಂದಾಗ ಮಹಿಳೆಯೊಬ್ಬರು ನೇರವಾಗಿ ದೂರಿದರು. ದುಡ್ಡು ಕೊಟ್ಟಿಲ್ಲ ಅಂದ್ರೆ ರೋಗಿಗಳನ್ನ ಅಟೆಂಡ್ ಮಾಡಲ್ಲ. ಬಡವರು ಯಾವ ಆಸ್ಪತ್ರೆಗೆ ಹೋಗಬೇಕು? ಇಲ್ಲಿ ವೈದ್ಯರನ್ನ ವಿಚಾರಿಸಿದಾಗ ಎಲ್ಲಾ ಸರಿ ಇದೆ ಅಂತಾರೆ. ಎರಡು ತಾಸಿನಿಂದ ಓಡಾಡ್ತಿದ್ದೀನಿ. ವ್ಹೀಲ್ ಚೇರ್ ಸಿಕ್ಕಿಲ್ಲ ಅಂತಾರೆ ಒಬ್ಬರು. ಈ ಬಗ್ಗೆ ಮಹಿಳೆ ಹೇಳಿದ್ರು. ಅಸ್ತವ್ಯಸ್ತ ಪರಿಸ್ಥಿತಿ ಇದೆ. ಇದರ ಬಗ್ಗೆ ಮೆಡಿಕಲ್ ಡಿಪಾರ್ಟ್ಮೆಂಟ್‌ಗೆ ಹೇಳಿದ್ದೇವೆ. ಈ ಬಗ್ಗೆ ನಾವು ಕೇಸ್ ರಿಜಿಸ್ಟರ್ ಮಾಡ್ತೀವಿ. ಹಳೆ ಕಾಟ್, ಹರಿದು ಹೋದ ಬೆಡ್ ಅನ್ನ ಇಟ್ಟಿದ್ದಾರೆ. ಐಸಿಯು ಕಾಟ್‌ಗಳನ್ನ ಇಟ್ಟಿದ್ದಾರೆ. ಪೇಷೆಂಟ್ ಬಂದ್ರೆ ವ್ಯವಸ್ಥೆ ಮಾಡ್ತೀವಿ ಅಂತಾರೆ. ಎಲ್ಲಾ ಕಡೆ ಧೂಳು ಇದೆ ಎಂದು ತಿಳಿಸಿದ್ದಾರೆ.
ಇಂಥ ಹಾಸ್ಪಿಟಲ್‌ಗಳಲ್ಲಿ ಈ ರೀತಿ ಆಗಿದೆ. ಇದನ್ನ ಸಿರೀಯಸ್ ಆಗಿ ಪರಿಗಣಿಸ್ತೀವಿ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೊಡ್ತೀವಿ. ಸ್ಟಾಪ್ ಕಡಿಮೆ ಇರೋ ಬಗ್ಗೆ ಮಾಹಿತಿ ತರಿಸ್ತೀವಿ. ಮೇಲಧಿಕಾರಿಗಳ ಮೂಲಕ ವಿಚಾರಣೆ ಮಾಡ್ತೀವಿ. ಮಾನಿಟರಿಂಗ್ ಮಾಡಬೇಕು. ಆದರೆ ಮಾಡ್ತಿಲ್ಲ. ಓಪಿಡಿ ಸರ್ಜನ್ ಎಲ್ರೂ ಚೆಕ್ ಮಾಡಬೇಕು. ಟಾಯ್ಲೆಟ್‌ನಲ್ಲಿ ಫ್ಲಶ್ ಇಲ್ಲ, ನೀರಿಲ್ಲ, ರೋಗಿ ಎಲ್ಲಿ ಹೋಗಬೇಕು? ಇದನ್ನ ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ತೀವಿ. ವೈದ್ಯರು ಯಾರೂ ಬರ್ತಿಲ್ಲ. ಐದು ಜನ ವೈದ್ಯರಲ್ಲಿ ಒಬ್ಬರು ಇದ್ದಾರೆ. ವೈದ್ಯರಿಗೆ ನೋಟಿಸ್ ಕೊಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಹಮ್ಮಿಕೊಂಡಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶದ ವಿರುದ್ಧ ಎಐಸಿಸಿಗೆ ದೂರು
ಉಪಲೋಕಾಯುಕ್ತ ಕೆ.ಎನ್.ಪಣೀಂದ್ರ ಮಾತನಾಡಿ, ಹೆರಿಗೆ ಮಕ್ಕಳ ವಾರ್ಡ್‌ಗೆ ವಿಸಿಟ್ ಮಾಡಿದ್ವಿ. ನೀರಿನ ಸೌಲಭ್ಯ ಹೆಣ್ಣುಮಕ್ಕಳಿಗಿಲ್ಲ. ಕುಡಿಯೋ ನೀರು, ಬಿಸಿ ನೀರು ಇಲ್ಲ. ಬೆಡ್‌ಶೀಟ್ ನಿತ್ಯ ಸ್ವಚ್ಛ ಮಾಡಬೇಕು. ಆದ್ರೆ ಅದು ಕಾಣ್ತಿಲ್ಲ. ಹಾಜರಾತಿ ಪುಸ್ತಕದಲ್ಲಿ ಕೆಲವು ವಿಚಾರ ಗೊತ್ತಾಗಿದೆ. ಕೆಲವರು ಲಾಂಗ್ ಲೀವ್‌ನಲ್ಲಿ ಇರೋದು ಗೊತ್ತಾಗಿದೆ. ಎಂಟ್ರಿ ಬುಕ್‌ಗಳನ್ನ ಚೆಕ್ ಮಾಡಿದಾಗ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹಾಗಾಗಿ ಸೂಪರಿಂಡೆಂಟ್‌ಗೆ ಸರಿಯಾದ ಕ್ರಮಕೈಗೊಳ್ಳೋಕೆ ಹೇಳಿದ್ದೇವೆ. ಡಾಕ್ಟರ್ಸ್ ಮೇಲೆ ಯಾವುದೇ ಆರೋಪ ಇಲ್ಲ. ಸ್ಪೆಷಲ್ ಹೆರಿಗೆ ವಾರ್ಡ್ ಕಂಪ್ಲೀಟ್ ಖಾಲಿಯಾಗಿದೆ. ಬೆಡ್ ಗಳು ಧೂಳು ಹಿಡಿದಿರೋದು ಗೊತ್ತಾಗಿದೆ. ಹಳೆ ಕಾಲದ ಬಿಲ್ಡಿಂಗ್ ಒಳಗೆ ಪಾಚಿ ಕಟ್ಟಿದೆ. ಶೌಚಾಲಯಗಳನ್ನ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಕಾಟಾಚಾರಕ್ಕೆ ಬಂದು ಕ್ಲೀನ್ ಮಾಡ್ತಾರೆ. ಟಾಯ್ಲೆಟ್ ಡೋರ್‌ಗಳು ಸರಿ ಇಲ್ಲ. ಆಸ್ಪತ್ರೆ ಅಂದ್ರೆ ದೇವಾಲಯ ಇದ್ದ ಹಾಗೆ. ಆದ್ರೆ ಇಲ್ಲಿ ಶುಚಿತ್ವ ಕಾಣ್ತಿಲ್ಲ. ಎಲ್ಲದಕ್ಕೂ ಕಾರಣ ಸೂಪರಿಂಡೆಂಟ್. ಸಣ್ಣ ಸಣ್ಣ ಮಕ್ಕಳಿಗೆ ಹೊಟ್ಟೆಯಲ್ಲಿ ಗ್ಯಾಸ್ ಎಷ್ಟಿದೆ ಅಂಥ ಚೆಕ್ ಮಾಡೋಕೆ ಮೆಷಿನ್ ಇಲ್ಲ. ಬೇರೆ ಕಡೆ ಚಿಕ್ಕ ಮಕ್ಕಳನ್ನ ಕರ್ಕೊಂಡು ಹೋಗ್ತಾರೆ. ಅದರ ಬಗ್ಗೆಯೂ ವೈದ್ಯರು ಮಾಹಿತಿ ಕೊಟ್ಟಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನ ಕೊಡ್ತೀವಿ ಎಂದು ತಿಳಿಸಿದ್ದಾರೆ.