ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ – ಬೆಂಗಳೂರು ಸೇರಿ ಹಲವೆಡೆ ‘ಲೋಕಾ’ ದಾಳಿ

Public TV
1 Min Read
lokayukta raid tumakuru

ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ದಾಳಿ ನಡೆಸಿದೆ.

ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆ ಭ್ರಷ್ಟ ಏಳು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳನ್ನು ದಾಳಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅಧಿಕಾರಿಗಳಾದ ಟಿ.ವಿ.ಮುರಳಿ, ಹೆಚ್‌.ಆರ್‌.ನಟರಾಜ್‌ ಮತ್ತು ಗ್ರಾಮಾಂತರದಲ್ಲಿ ಅನಂತ್‌ಕುಮಾರ್‌ಗೆ ಸೇರಿದ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿದೆ.

ತುಮಕೂರು: ನಿರ್ಮಿತಿ ಕೇಂದ್ರ ಎಂಡಿ ರಾಜಶೇಖರ ಮನೆ ಮೇಲೆ ರೇಡ್‌ ಆಗಿದೆ. ತುಮಕೂರಿನ ಸಪ್ತಗಿರಿ ಬಡಾವಣೆ, ಎಸ್‌ಎಸ್ ಪುರಂನಲ್ಲಿ ಇರುವ ರಾಜಶೇಖರ ಸಹೋದರನ ಮನೆ ಮೇಲೂ ದಾಳಿ ಆಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಕಾರಣಕ್ಕೆ 10 ಮಂದಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಕಲಬುರಗಿ: ಶಹಾಪೂರ ತಹಸೀಲ್ದಾರ್‌ ಉಮಾಕಾಂತ ಹಳ್ಳೆ ಅವರ ಮನೆ ಮೇಲೂ ದಾಳಿ ಆಗಿದೆ. ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ ತಹಸೀಲ್ದಾರ್‌ ಅವರ ಮನೆ ಮತ್ತು ಕಚೇರಿ ಇದೆ. ಮನೆ ಹಾಗೂ ಕಚೇರಿಯಲ್ಲಿ ಲೋಕಾ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

Share This Article