ಬೆಳಗಾವಿ: ಬಳ್ಳಾರಿಯಲ್ಲಿ (Ballari) ಬಾಣಂತಿಯರ ಸಾವಿಗೆ ಆರ್‌ಎಲ್‍ಎಸ್ ಐವಿ ಗ್ಲುಕೋಸ್ ಕಾರಣ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಮ್ಸ್ ಆಸ್ಪತ್ರೆಯ (BIMS Hospital) ಆವರಣದಲ್ಲಿರುವ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ದಾಳಿ ವೇಳೆ ಹತ್ತಾರು ಬಾಕ್ಸ್‌ಗಳಲ್ಲಿ ಆರ್‌ಎಲ್‍ಎಸ್ ಐವಿ ಗ್ಲುಕೋಸ್ ಪತ್ತೆಯಾಗಿದೆ. ಪಿಬಿಪಿ ಸಂಸ್ಥೆ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸ್‌ಗಳು ಇದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಟ್ಟಿದ್ದ ಬಾಕ್ಸ್‌ಗಳನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
Advertisement
ಏಪ್ರಿಲ್ ತಿಂಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ಆರ್‍ಎಲ್‍ಎಸ್ ಐವಿ ಗ್ಲುಕೋಸ್ ಸರಬರಾಜಾಗಿದೆ. ಒಂದು ಗಂಟೆಗೂ ಹೆಚ್ಚಿನ ಸಮಯದಿಂದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಉಗ್ರಾಣದ ಅಧಿಕಾರಿಗಳಿಂದ ಎಲ್ಲೆಲ್ಲಿ ಐವಿ ಗ್ಲುಕೋಸ್ ಪೂರೈಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
Advertisement
Advertisement
ಈ ವೇಳೆ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
Advertisement
ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದ್ದು, 8 ಜನ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.