ಬೆಂಗಳೂರು: ಲೋಕಾಯುಕ್ತ (Lokayukta) ಭಾರೀ ದಾಳಿ ನಡೆಸಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್ ಒ, ಎಆರ್ ಒ, ಎಡಿಟಿಪಿ ಕಚೇರಿಗಳ ಮೇಲೆ ದಿನದ ಅಂತ್ಯದ ಹೊತ್ತಿಗೆ ಏಕಕಾಲದಲ್ಲಿ ರೇಡ್ ಮಾಡಿದೆ.
Advertisement
ಆರ್‍ಪಿಸಿ ಲೇಔಟ್, ಬ್ಯಾಟರಾಯನಪುರ, ಮಲ್ಲೇಶ್ವರಂನ ಕಂದಾಯ ಕಚೇರಿ, ಟೌನ್ ಪ್ಲಾನಿಂಗ್ ಕಚೇರಿ, ಯಟಿಲಿಟಿ ಬಿಲ್ಡಿಂಗ್‍ನಲ್ಲಿರುವ ಕಂದಾಯ ಕಚೇರಿ ಸೇರಿ ಒಟ್ಟು 45 ಕಡೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಧಿಕಾರಿಗಳು, ಸಿಬ್ಬಂದಿಯನ್ನು ಕಚೇರಿಯಲ್ಲಿಯೇ ಇರಿಸಿಕೊಂಡು ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ಮಿಸ್ ವೆನೆಜುವೆಲಾ ದುರ್ಮರಣ
Advertisement
Advertisement
ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ದಾಳಿಯ ನೇತೃತ್ವ ವಹಿಸಿದ್ದಾರೆ. ವಿಜಯನಗರ, ರಾಜಾಜಿನಗರ ಕಂದಾಯ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಖುದ್ದಾಗಿ ಕರೆ ಮಾಡಿ ಬಿಬಿಎಂಪಿ ಅಧಿಕಾರಿಗಳು ಲಂಚ ಕೇಳಿದ್ರಾ ಎಂದು ಕೇಳಿದ್ದಾರೆ. ನಿಮ್ಮ ಆಫೀಸ್‍ಗಳ ಮುಂದೆ ಬಂದು ನಿಂತ್ರೆ ರಕ್ತ ಹೀರುತ್ತಿದ್ದಾರೆ ಅಂತಾ ಜನ ಹೇಳ್ತಿದ್ದಾರೆ. ಇದಕ್ಕೆ ಏನಂತೀರಾ? ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. ತಪ್ಪುಗಳನ್ನು ತೋರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Web Stories